ಉದಯವಾಹಿನಿ,  ಕುಶಾಲನಗರ:ನಸಾಮಾನ್ಯರಿಗೆ ಸೌಕರ್ಯ ಒದಗಿಸಲು ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಮಸ್ಯೆ ಹಾಗೂ ಆರೋಪಗಳಿಗೆ ಆಸ್ಪದ ನೀಡದಂತೆ ಆಡಳಿತ ನಡೆಸುವುದು ಅವಶ್ಯಕತೆ ಮುಂಬರುವ ಆಡಳಿತ ಮಂಡಳಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಯತ್ನಿಸಬೇಕು ಎಂದು ಶಾಸಕ ಮಂತರ್ ಗೌಡ ತಿಳಿಸಿದರು.
ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿ ನಬಾರ್ಡ್ ಪ್ರಾಯೋಜಕತ್ವದಲ್ಲಿ
70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು ಈ ಸಂದರ್ಭ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ ಪಿ ಗಣಪತಿ ಗೋದಾಮು ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘದ ಸದಸ್ಯರಿಗೆ ಅನುಕೂಲ ಒದಗಿಸುವ ಬದ್ಧತೆ ಸಹಕಾರ ಸಂಘದ ಆಡಳಿತ ಮಂಡಳಿಗೆ ಬೇಕಿದೆ ಸರ್ಕಾರ ಹಾಗೂ ಸಹಕಾರ ಇಲಾಖೆ ಹೊರತುಪಡಿಸಿ ಸದಸ್ಯರಿಂದಲೇ ಸಂಘಗಳು ಅಭಿವೃದ್ಧಿ ಕಾಣುತ್ತಿವೆ ಎಂದರು. ಸಂಘದ ಅಧ್ಯಕ್ಷ ಎಚ್ ಟಿ. ಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಬಿ.ಕೆ ಚಿಣ್ಣಪ್ಪ. ಎಸ್‌ವಿ ಭರತ್ ಕುಮಾರ್. ಜಲಜಶೇಖರ್ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರೂಪ. ಸಹಾಯಕ ನಿಬಂಧಕ ಎಂ.ಇ ಮೋಹನ್ ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ತುಂಗರಾಜ್.
ತೊರೆನೂರು ಸಹಕಾರ ಸಂಘದ ಉಪಾಧ್ಯಕ್ಷ ಲಲಿತ. ನಿರ್ದೇಶಕರಾದ ಎಚ್ ವಿ ಚಂದ್ರಪ್ಪ ಟಿ.ಜಿ ಲೋಕೇಶ್ ಕಾರ್ಯನಿರ್ವಾಹಣಾಧಿಕಾರಿ ಪ್ರೀತು ಪ್ರಸಾದ್ ಸಂಘದ ನಿರ್ದೇಶಕ ಟಿಕೆ ಪಾಂಡುರಂಗ ಇತರರು ಇದ್ದರು.
ಇದೇ ಸಂದರ್ಭ ನೂತನ ಶಾಸಕರು ಗುತ್ತಿಗೆದಾರರು ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು ಸಿಬ್ಬಂದಿಗಳು ಹಾಗೂ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!