ಉದಯವಾಹಿನಿ ಬೆಂಗಳೂರು : “ನವ್ಯ ಆಭರಣ” ವತಿಯಿಂದ ಕೆ.ಆರ್‌ ಪುರಂ ನಲ್ಲಿ ಹೊಸದಾಗಿ ಆರಂಭಿಸಲಾಗಿರುವ ಆಭರಣ ಮಳಿಗೆಯನ್ನ ಮಾಜಿ ಸಚಿವರು ಹಾಗೂ ಕೆ.ಆರ್‌ ಪುರಂ ಶಾಸಕರಾದ ಭೈರತಿ ಬಸವರಾಜ್‌ ಉದ್ಘಾಟಿಸಿದರು.ಕೆ.ಆರ್‌ ಪುರಂ ನ ಭಾಗದಲ್ಲಿ ಹೊಸದಾಗಿ ಮಳಿಗೆ ಪ್ರಾರಂಭವಾಗಿರುವುದು ಸಂತಸದ ವಿಷಯವಾಗಿದೆ. ಈ ಮಳಿಗೆ ಉತ್ತಮ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.ನವ್ಯ ಆಭರಣ ಮಳಿಗೆ ವ್ಯವಸ್ಥಾಪ ನಿರ್ದೇಶಕರಾದ ಸಂಕೇತ್‌ ಗೂಡುರ್‌ ಮತನಾಡಿನೂತನ ಮಳಿಗೆ ಉದ್ಘಾಟನೆ ಪ್ರಯುಕ್ತ ಚಿನ್ನಾಭರಣ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಪ್ರಕಟಿಸಲಾಗಿದೆ. ಆಭರಣಗಳ ಮೇಲೆ ಸ್ಟೋನ್‌ ಛಾರ್ಜಸ್‌ ಮೈನಸ್‌ ಮಾಡಲಿದ್ದುವೇಸ್ಟೇಜ್‌ ಮತ್ತು ಮೇಕಿಂಗ್‌ ಛಾರ್ಜಸ್‌ ಕಡಿಮೆ ಇರಲಿದೆ. ಸ್ವರ್ಣ ವರ್ಷ ಉಳಿತಾಯ ಯೋಜನೆ ಆರಂಭಿಸಿದ್ದು ತಿಂಗಳಿಗೆ 1000 ರೂಪಾಯಿಗಳಿಂದ ಹೂಡಿಕೆ ಮಾಡಬಹುದಾಗಿದೆ ಎಂದು ಹೇಳಿದರು. ಐ ಎಫ್ ಎಸ್ ಮನೋಜ್ ರಂಜನ್ಬೆಂಗಳೂರು ಜ್ಯುವೆಲ್ಲರಿ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!