ಉದಯವಾಹಿನಿ ಹೊಸಕೋಟೆ : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಗ್ರಾಮಾಭಿವೃದ್ಧಿಯ ಪರಿಕಲ್ಪನೆಯನ್ನು ರೂಢಿಸಿಕೊಂಡು ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರ ಗ್ರಾಮಗಳನ್ನಾಗಿ ಪರಿವರ್ತಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತಾಗಬೇಕು ಎಂದು  ಗ್ರಾಮ ಪಂಚಾಯಿತಿ ಸದಸ್ಯತಮ್ಮಣ್ಣ ಹೇಳಿದರು. ತಾಲೂಕಿನ ಚೊಕ್ಕಹಳ್ಳಿ ಗ್ರಾಪಂ. ವ್ಯಾಪ್ತಿಯ ಮಲ್ಲಿಮಾಕನಪುರದ ಸರಕಾರಿ ಶಾಲೆಯಲ್ಲಿ ದೇವನಹಳ್ಳಿ ಇಂಟರ್ ನ್ಯಾಷನಲ್‌ಇನ್ಸ್ಟ್ಯೂಟ್‌ಆಫ್ ಬಿಸಿನೆಸ್ ಸ್ಟಡೀಸ್‌ಕಾಲೇಜಿನ ವಿದ್ಯಾರ್ಥಿಗಳಿಂದ ಎನ್‌ಎಸ್‌ಎಸ್ ಶಿಬಿರದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳನ್ನು ಕಲಿಸುತ್ತದೆ. ಬುದ್ಧ ಬಸವ ಗಾಂಧೀಜಿಯವರ ಹಾದಿಯಲ್ಲಿ ನಡೆದರೆಕಲ್ಯಾಣರಾಷ್ಟçಕಟ್ಟುವುದರಲ್ಲಿ ಸಂಶಯವಿಲ್ಲ. ಆ ದಿಸೆಯತ್ತ ಮುಂದೆ ಸಾಗಬೇಕು. ಸಾಮಾಜಿಕ ಮೌಲ್ಯಗಳನ್ನು ಶಿಬಿರದ ಮೂಲಕ ಕಲಿಯುವುದರಜೊತೆಗೆಗ್ರಾಮ ನೈರ್ಮಲ್ಯತೆ ಮತ್ತು ಗ್ರಾಮಗಳ ಸರ್ವಾಂಗೀಣಅಭಿವೃದ್ಧಿಗೆ ಶ್ರಮಿಸಲು ಮುಂದಾಗಬೇಕು.
ಎನ್‌ಎಸ್‌ಎಸ್ ಶಿಬಿರಗಳಲ್ಲಿ ಜಾತಿ, ಮತ, ಧರ್ಮಗಳೆಂಬ ಭೇದ ಭಾವಗಳಿರುವುದಿಲ್ಲ. ಗ್ರಾಮದ ಪ್ರತಿ ಮನೆ-ಮನೆಗೂ ತೆರಳಿ, ಶೌಚಾಲಯಗಳ ಬಳಕೆ, ಮನೆಯ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಟ್ಟು, ಆರೋಗ್ಯವನ್ನು ಕಾಪಾಡಿಕೊಳ್ಳುವುದಲ್ಲದೆ, ಸರಕಾರದಿಂದ ಸಿಗುವ ಸವಲತ್ತುಗಳ ಸದುಪಯೋಗ ಪಡೆಸಿಕೊಳ್ಳುವಂತೆ ಜನರಲ್ಲಿಅರಿವು ಮೂಡಿಸುವುದು ಶಿಬಿರಾರ್ಥಿಗಳ ಜವಾಬ್ದಾರಿಯಾಗಿರಬೇಕುಎಂದರು.
ಕರ್ನಾಟಕ ಸಂಪಾದಕರ ವರದಿಗಾರರ ಸಂಘದರಾಜ್ಯ ನಿರ್ದೇಶಕ ಟಿ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಎನ್‌ಎಸ್‌ಎಸ್ ಶಿಬಿರವು ಜಾಗೃತಿಯನ್ನು ಮೂಡಿಸಿ, ಜವಾಬ್ದಾರಿಯುತ ಪ್ರಜೆಯನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಉತ್ತಮ ವೇದಿಕೆಯಾಗಿದೆ. ಸಹಬಾಳ್ವೆ, ಸಂಘಟನೆ, ಶ್ರಮದಾನ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವುದರಜೊತೆಗೆ ಸಾಮಾಜಿಕ ಕಳಕಳಿಯನ್ನು ಕಲಿಸುತ್ತದೆ.
ಕಾರ್ಯಕ್ರಮದಲ್ಲಿಗ್ರಾಮ ಪಂಚಾಯಿತಿ ಪಿಡಿಒಎಂ.ಮಹೇಶ್, ಎನ್‌ಎಸ್‌ಎಸ್ ಶಿಬಿರದ ಮೇಲ್ವಿಚಾರಕರಾದ ಮುನಿನಂಜಪ್ಪ, ರಾಜಶೇಖರ್, ಅರ್ಚನ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!