ಉದಯವಾಹಿನಿ,: ಸಾಮಾನ್ಯವಾಗಿ ಚಿಕನ್ ಅಥವಾ ಮಟನ್ ಬಳಸಿ ಕಬಾಬ್ ರೀತಿ ಮಾಡುತ್ತವೆ. ಅದೇ ರೀತಿ ಫಿಶ್ ಕಬಾಬ್ ಮಾಡೋದು ಹೇಗೆ ಎಂದು ತಿಳಿಯಿರಿ. ಸುಲಭವಾಗಿ, ಕಡಿಮೆ ಸಮಯದಲ್ಲಿ ಮಾಡಬಹುದು. ಬೇಕಾಗುವ ಸಾಮಗ್ರಿಗಳು:
ಬೋನ್ ಲೆಸ್ ಫಿಶ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಕಾರ್ನ್ ಫ್ಲೋರ್
ಕೆಂಪು ಖಾರದ ಪುಡಿ
ಅರಶಿನ ಪುಡಿ
ಉಪ್ಪು
ನಿಂಬೆ ರಸ
ಕರಿಮೆಣಸಿನ ಪುಡಿ
ಗರಂ ಮಸಾಲ
ಮಾಡುವ ವಿಧಾನ:
ಮೊದಲಿಗೆ ಬೋನ್ ಲೆಸ್ ಫಿಶ್ ಅನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಮೊದಲಿಗೆ ತೊಳೆದುಕೊಂಡ ಫಿಶ್ ಗೆ ಅರಿಶಿಣ, ಕೆಂಪು ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ, ಗರಂ ಮಸಾಲ, ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಅದಕ್ಕೆ ಕಾರ್ನ್ ಫ್ಲೋರ್ ಸೇರಿಸಿ, ಚೆನ್ನಾಗಿ ಕಲಸಿ. ಬದಿಗಿಟ್ಟುಕೊಳ್ಳಬೇಕು. ಮತ್ತೊಂದೆಡೆ ಒಂದು ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಕಲಸಿಟ್ಟ ಫಿಶ್ ಅನ್ನು ಎಣ್ಣೆಗೆ ಹಾಕಿ, ಚೆನ್ನಾಗಿ ಕರಿದುಕೊಳ್ಳಬೇಕು. ಆಗ ಫಿಶ್ ಕಬಾಬ್ ತಯಾರಾಗುತ್ತದೆ.
