ಉದಯವಾಹಿನಿ, ಸೌತೆಕಾಯಿಯ ತುದಿಗಳನ್ನು ಉಜ್ಜಿದಾಗ ಬರುವ ನೊರೆ ಕುಕುರ್ಬಿಟಾಸಿನ್ ಎಂಬ ನೈಸರ್ಗಿಕ ಸಂಯುಕ್ತದಿಂದ ಉಂಟಾಗುತ್ತದೆ. ಇದು ಸಂಪೂರ್ಣವಾಗಿ ನೈಸರ್ಗಿಕ ಪ್ರಕ್ರಿಯೆ, ಯಾವುದೇ ರಾಸಾಯನಿಕಗಳು ಇದರಲ್ಲಿರುವುದಿಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಆತಂಕ ಬೇಡ. ಸೌತೆಕಾಯಿ ಮೇಲ್ಭಾಗ ಕತ್ತರಿಸಿ, ಉಜ್ಜಿದಾಗ ಬಿಳಿ ನೊರೆ ಬರುವುದನ್ನು ನೀವು ಹೆಚ್ಚಾಗಿ ಗಮನಿಸಿರಬಹುದು. ಅಷ್ಟಕ್ಕೂ ಈ ನೊರೆ ಎಲ್ಲಿಂದ ಬರುತ್ತದೆ ಅಂತ ತಿಳಿದ್ರೆ ನಿಮಗೆ ಶಾಕ್ ಆಗಬಹುದು. ಕೆಲವರು ಸೌತೆಕಾಯಿಯಲ್ಲಿ ಬರುವ ಈ ನೊರೆಯನ್ನು ಕೊಳಕು ಎಂದು ಭಾವಿಸುತ್ತಾರೆ, ಇನ್ನೂ ಕೆಲವರು ಇದು ರಾಸಾಯನಿಕಗಳು ಎಂದು ಭಾವಿಸುತ್ತಾರೆ. ಆದರೆ ಇದರ ಹಿಂದೆ ಒಂದು ಸರಳ ವೈಜ್ಞಾನಿಕ ಕಾರಣವಿದೆ.

ಋಷಿಕೇಶದ ಆಯುಷ್ ವೈದ್ಯ ಡಾ. ರಾಜ್‌ಕುಮಾರ್ ಅವರ ಪ್ರಕಾರ, ಸೌತೆಕಾಯಿಗಳು ವಿವಿಧ ನೈಸರ್ಗಿಕ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಸೌತೆಕಾಯಿಗಳ ಸೌಮ್ಯವಾದ ಕಹಿ ‘ಕುಕುರ್ಬಿಟಾಸಿನ್’ ಎಂಬ ಸಂಯುಕ್ತದಿಂದಾಗಿ ಉಂಟಾಗುತ್ತದೆ. ನೊರೆ ಏಕೆ ಉಂಟಾಗುತ್ತದೆ?: ಸೌತೆಕಾಯಿಯನ್ನು ಕತ್ತರಿಸಿ ಉಜ್ಜಿದಾಗ ಒಳಗಿನ ರಸ ಹೊರ ಬರುತ್ತದೆ. ಅದು ಗಾಳಿಯ ಸಂಪರ್ಕಕ್ಕೆ ಬಂದಾಗ, ಈ ಸಂಯುಕ್ತವು ನೊರೆಯಂತೆ ಕಾಣುತ್ತದೆ. ಸೌತೆಕಾಯಿ ಉಜ್ಜಿದಾಗ ರಸ ಮತ್ತು ನೈಸರ್ಗಿಕ ಕಿಣ್ವಗಳು ಮೇಲ್ಮೈಯಲ್ಲಿ ಬಿಡುಗಡೆಯಾಗುತ್ತವೆ. ಗಾಳಿಗೆ ಒಡ್ಡಿಕೊಂಡಾಗ ಇವು ಸೌಮ್ಯವಾದ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತವೆ ಮತ್ತು ನೊರೆ ರೂಪುಗೊಳ್ಳುತ್ತದೆ. ಇದು ಸಂಪೂರ್ಣವಾಗಿ ನೈಸರ್ಗಿಕ ಪ್ರಕ್ರಿಯೆ ಆಗಿದ್ದು, ಇದಕ್ಕೆ ಯಾವುದೇ ಬಾಹ್ಯ ಪದಾರ್ಥಗಳ ಅಗತ್ಯವಿಲ್ಲ.

Leave a Reply

Your email address will not be published. Required fields are marked *

error: Content is protected !!