ಉದಯವಾಹಿನಿ, ನಾವೆಲ್ಲರು ಸುಲಭವಾಗಿ, ಬೇಗ ಆಗುವಂತಹ ಅಡಿಗೆ ಮಾಡಲು ಇಷ್ಟಪಡುತ್ತೇವೆ. ಜೊತೆಗೆ ಮಾಡುವ ತಿಂಡಿ ಆರೋಗ್ಯಕ್ಕೂ ಒಳ್ಳೆಯದಾಗಿರಬೇಕು. ಹೀಗಿರುವುದಾಗ ಓಟ್ಸ್‌ ಉಪ್ಪಿಟ್ಟು ಮಾಡಿ, ತಿನ್ನಿ… ನಿಜಕ್ಕೂ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಸುಲಭವಾಗಿ ತಯಾರಿಸಿ ತಿನ್ನಬಹುದು. ಬೇಕಾಗುವ ಸಾಮಗ್ರಿಗಳು: ಓಟ್ಸ್‌ , ಎಣ್ಣೆ, ಮೆಣಸಿನಕಾಯಿ, ಈರುಳ್ಳಿ, ಉಪ್ಪು, ಅರಿಶಿಣ, ಈರುಳ್ಳಿ, ಬೀನ್ಸ್‌
ಸಾಸಿವೆ, ಜೀರಿಗೆ

ಮಾಡುವ ವಿಧಾನ:
ಮೊದಲಿಗೆ ಓಟ್ಸ್‌ನ್ನು ಕಂದು ಬಣಕ್ಕೆ ತಿರುಗುವವರೆಗೂ ಹುರಿದುಕೊಳ್ಳಬೇಕು. ಬಳಿಕ ಒಂದು ಕಡಾಯಿಯಲ್ಲಿ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು ಹಾಕಿಕೊಳ್ಳಬೇಕು. ಅದಕ್ಕೆ ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಮೆಣಸಿನಕಾಯಿ, ಗಜ್ಜರಿ, ಬೀನ್ಸ್‌ ಹಾಕಬೇಕು. ಅದಕ್ಕೆ ಅರಿಶಿಣ, ಉಪ್ಪು ಚೆನ್ನಾಗಿ ಮಿಕ್ಸ್‌ ಮಾಡಬೇಕು. ಅದಕ್ಕೆ ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಕೊನೆಗೆ ಹುರಿದ ಓಟ್ಸ್‌ನ್ನು ಹಾಕಿ ಸ್ವಲ್ಮ ಹೊತ್ತು ಬೇಯಿಸಿಕೊಂಡರೇ ಓಟ್ಸ್‌ ಉಪ್ಪಿಟ್ಟು ತಯಾರಾಗುತ್ತದೆ.

Leave a Reply

Your email address will not be published. Required fields are marked *

error: Content is protected !!