ಉದಯವಾಹಿನಿ, ಅನೇಕ ಜನರು ಕ್ಯಾಪ್ಸಿಕಂನಿಂದ ಮಾಡಿದ ರೆಸಿಪಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ನಿಮ್ಮ ಮನೆಯಲ್ಲಿಯೂ ಕ್ಯಾಪ್ಸಿಕಂನಿಂದ ತಯಾರಿಸಿದ ಯಾವುದೇ ಅಡುಗೆಗಳನ್ನು ಬೇಡ ಎಂದು ಹೇಳುತ್ತೀರಾ? ಆದರೆ, ಈ ಚಟ್ನಿಯನ್ನು ಮಾಡಲು ಪ್ರಯತ್ನಿಸಿ. ಇಷ್ಟವಿಲ್ಲದವರೂ ಸಹ ಬಾಯಿ ಚಪ್ಪರಿಸಿ ಸೇವನೆ ಮಾಡುತ್ತಾರೆ.

ತುಂಬಾ ರುಚಿಕರವಾದ ದೊಣ್ಣೆ ಮೆಣಸಿನಕಾಯಿ ಚಟ್ನಿಯನ್ನು ಅನ್ನದೊಂದಿಗೆ ಇಲ್ಲವೇ ಟಿಫಿನ್‌ಗಳಲ್ಲಿ ತುಂಬಾ ರುಚಿಕರವಾಗಿರುತ್ತದೆ. ಈ ಸೂಪರ್​ ರುಚಿಯ ಈ ಚಟ್ನಿಯನ್ನು ಕಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು. ಈ ಸರಳವಾದ ರುಚಿಕರವಾದ ಚಟ್ನಿಗೆ ಬೇಕಾದ ಪದಾರ್ಥಗಳು ಯಾವುವು ಹಾಗೂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಕ್ಯಾಪ್ಸಿಕಂ – 4
ಬೆಳ್ಳುಳ್ಳಿ ಎಸಳುಗಳು – 10
ಹುಣಸೆಹಣ್ಣು – 30 ಗ್ರಾಂ
ಒಣ ಮೆಣಸಿನಕಾಯಿ – 16
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 4 ಟೀಸ್ಪೂನ್
ಅರಿಶಿನ – 2 ಚಿಟಿಕೆ
ಕರಿಬೇವು – ಸ್ವಲ್ಪ
ಇಂಗು – ಒಂದು ಚಿಟಿಕೆ
ಬಹುತೇಕರು ತುಂಬಾ ಇಷ್ಟವಾಗುವಂತಹ ಸಖತ್ ರುಚಿಕರವಾದ ದೊಣ್ಣೆ ಮೆಣಸಿನಕಾಯಿ ಚಟ್ನಿ ತಯಾರಿಸಲು ಮೊದಲಿಗೆ, ನಾಲ್ಕು ಮೆಣಸಿನಕಾಯಿಗಳನ್ನು ತೆಗೆದುಕೊಂಡು ಅವುಗಳನ್ನು ಸ್ವಚ್ಛಗೊಳಿಸಿ, ಸಣ್ಣ ತುಂಡುಗಳಾಗಿ ಕತ್ತರಿಸಿ ಪಕ್ಕಕ್ಕೆ ಇರಿಸಿ.
ಈಗ ಒಲೆ ಆನ್ ಮಾಡಿ ಹಾಗೂ ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಸುರಿಯಿರಿ. ಎಣ್ಣೆ ಬಿಸಿಯಾದ ಬಳಿಕ, 12 ಒಣ ಮೆಣಸಿನಕಾಯಿಗಳನ್ನು ಸೇರಿಸಿ ಹಾಗೂ ಹುರಿಯಿರಿ. ಅದರ ನಂತರ, ಒಣಗಿದ ಮೆಣಸಿನಕಾಯಿಗಳನ್ನು ತೆಗೆದು ಒಂದು ತಟ್ಟೆಯಲ್ಲಿ ಹಾಕಿ.

 

Leave a Reply

Your email address will not be published. Required fields are marked *

error: Content is protected !!