ಉದಯವಾಹಿನಿ, ಕ್ಯಾನ್‍ಬೆರಾ : ಡಿಸೆಂಬರ್‌ನಲ್ಲಿ ಆಸ್ಟ್ರೀಲಿಯಾದ ಬೋಂಡಿ ಬೀಚ್‌ನಲ್ಲಿ ಆಯೋಜಿಸಿದ್ದ ಯಹೂದಿ ಉತ್ಸವದ ವೇಳೆ ನಡೆದ ಗುಂಡಿನ ದಾಳಿಯಲ್ಲಿ 15 ಜನರು ಮೃತಪಟ್ಟ ಘಟನೆಯ ರಾಷ್ಟ್ರೀಯ ಶೋಕಾಚರಣೆಯ ದಿನದಂದು, ಮತ್ತೊಂದು ಶೂಟೌಟ್ ಜರುಗಿದೆ. ಕೆಲವೇ ದಿನಗಳ ಅಂತರದಲ್ಲಿ ನಡೆದ ಮತ್ತೊಂದು ದಾಳಿಗೆ ಆಸ್ಟ್ರೇಲಿಯಾ ಬೆಚ್ಚಿ ಬಿದ್ದಿದೆ. ಬೋಂಡಿ ಬೀಚ್ ದಾಳಿಯ ಒಂದು ತಿಂಗಳ ನಂತರ ನ್ಯೂ ಸೌತ್ ವೇಲ್ಸ್‌ನಲ್ಲಿ ನಡೆದ ಈ ಶೂಟೌಟ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದೂಕುಧಾರಿ ಮೊದಲು ತನ್ನ ಮಾಜಿ ಗೆಳತಿ ಮತ್ತು ಎನ್‌ಎಸ್‍ಡಬ್ಲ್ಯು ಸೆಂಟ್ರಲ್ ವೆಸ್ಟ್ ಪ್ರದೇಶದ ಲೇಕ್ ಕಾರ್ಗೆಲ್ಲಿಗೊದಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ. ನಂತರ ಪಟ್ಟಣದಲ್ಲಿ ತನಗೆ ಪರಿಚಿತರಾಗಿರುವ ಇತರ ಇಬ್ಬರ ಮೇಲೆ ಗುಂಡಿನ ಮಳೆಗೆರೆದ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಮೃತಪಟ್ಟಿದ್ದಾರೆ.
