ಉದಯವಾಹಿನಿ ಯಾದಗಿರಿ : ಉತ್ತರ ಕರ್ನಾಟಕದಲ್ಲಿ ಹಲವಾರು ಹಿರಿಯ ಕವಿ, ಕಲಾವಿದ, ಸಾಹಿತಿಗಳು ಇದ್ದಾರೆ. ಆದ್ರೆ ನಾವ ಪರಿಚಯ ಮಾಡಿಸಲು ಹೊರಟಿರುವ ಈ ಸಾಲಿನಲ್ಲಿ ಈಗ ಯುವ ಕಲಾವಿದ, ಬಹು ಮುಖಿ ಪ್ರತಿಭೆ ಹಾಡ ಹಾಡಲು ರೇಡಿ, ಚಿತ್ರ ಬಿಡಿಸಲು ರೇಡಿ, ಒಂದ ಎರಡ ಹತ್ತು ಹಲವು ಕಲೆಗಳನ್ನು ಮೈಗೂಡಿಸಿಕೊಂಡು ಸಾಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಪರೂಪದ ಚಿತ್ರ ಕಲಾವಿದ ಇವರಾಗಿದ್ದಾರೆ..ಹೌದು, ಇವರು ಗಿರಿನಾಡು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಯುವ ಕಲಾವಿದ ಹಳ್ಳೇರಾವ ಕುಲಕರ್ಣಿ. ಇವರು ಗ್ರಾಮೀಣ ಪ್ರದೇಶದಲ್ಲಿ ಇದ್ದುಕೊಂಡು ಹತ್ತು ಹಲವು ಕಲೆಗಳನ್ನು ಮೈಗೂಡಿಸಿಕೊಂಡು ಅಪರೂಪದ ಚಿತ್ರ ಕಲಾವಿದ ಇವರಾಗಿದ್ದಾರೆ.ಕಲೆ ಮಾತ್ರವಲ್ಲದೆ ಕವನ ರಚಿಸುವುದು, ಗಾಯನ, ಹಾರ್ಮೋನಿಯಂ, ಸರಳವಾಗಿ ದಾರದ ಮೂಲಕ ಚಿತ್ರ ಬಿಡಿಸುವುದು, ಕೊಳಲು ವಾದ್ಯ, ತಬಲಾ ನುಡಿಸುವುದು, ಮಣ್ಣಿನ ಮೂರ್ತಿ ತಯಾರಿಕೆ, ನೆರಳಿನ ಚಿತ್ರ (ಸ್ಯಾಡೊ ಪ್ಲೇ ) ಮೂಡಿಸುವುದು, ಕೀಬೋರ್ಡ್ ನುಡಿಸುವುದು ಮಾಡುತ್ತಾರೆ.ಇದಲ್ಲದೆ ಸೇರಿದಂತೆ ಅನೇಕ ಸಂಗೀತ ವಾದ್ಯಗಳನ್ನು ನುಡಿಸುದಲ್ಲದೆ ಕಟ್ಟಿಗೆ, ಕಲ್ಲು ಸಿಮೆಂಟ್ ಮುಂತಾದ ವಸ್ತುಗಳಲ್ಲಿ ಮೂರ್ತಿಗಳನ್ನು ತಯಾರಿಸುವ ಹವ್ಯಾಸ ಹೊಂದಿದ್ದಾರೆ.
*ವಿವಿಧ ಬಗೆಯ ಕಲಾಕೃತಿಗಳ ರಚನೆ: ವಾಟರ್ ಕಲರ್, ಆಯಿಲ್ ಮತ್ತು ಅಕ್ರಾಲಿಕ ಕಲರ, ಪೋಸ್ಟರ್ ಕಲರ್, ಪೆನ್ಸಿಲ್, ಪೆನ್ನು ಸೇರಿದಂತೆ ವಿವಿಧ ಬಗೆಯ ಮೀಡಿಯಾಗಳಿಂದ ಪೇಪರ್ ಕ್ಯಾನ್ವಾಸ್, ಗ್ಲಾಸಗಳ ಮೇಲೆ ಲ್ಯಾಂಡ್ ಸ್ಕೇಪ್, ಪೋರ್ಟರೇಟ, ಮಿನಿಯೇಚರ್, ಮಾರ್ಡನ್ ಆರ್ಟ್ ಸೇರಿದಂತೆ ಹಲವಾರು ಪ್ರಕಾರಗಳ ಕಲಾಕೃತಿ ರಚನೆ ಮಾಡುತ್ತಾರೆ.
 *ಕಲೆಗೆ ಹಲವಾರು ಪ್ರಶಸ್ತಿ ಗರಿಗಳು : ಹರಿದಾಸರತ್ನ ಪ್ರಶಸ್ತಿ, ಸಕಲಕಲಾವಲ್ಲಭ, ಸಂಗೀತ ಸೇವಾ ರತ್ನ, ನಾಲ್ವಡಿ ರಾಜಾ ವೆಂಕಟ್ಟಪ್ಪ ನಾಯಕ (ಸುರಪುರ ಅರಸು ಮನೆತನದಿಂದ ), ವಿಪ್ರಶ್ರೀ ಪ್ರಶಸ್ತಿ (ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಬೆಂಗಳೂರು), ಗಣರಾಜ್ಯೋತ್ಸವ ಪ್ರಶಸ್ತಿ (ಯಾದಗಿರಿ ಜಿಲ್ಲಾಡಳಿತ), ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು. ಈಗಾಗಲೇ ಕಲಬುರಗಿ ಕಂಪು ಕಾರ್ಯಕ್ರಮ, ರಾಜ್ಯ ಮಟ್ಟದ ಚಿತ್ರ ಕಲಾ ಪ್ರದರ್ಶನಗಳಲ್ಲದೆ ಅನೇಕ ಭಾಗಗಳಲ್ಲಿ ಇವರು ಚಿತ್ರಕಲಾ ಪ್ರದರ್ಶನ ಹಾಗೂ ದಾಸವಾಣಿ ಸಂಗೀತ ಕಾರ್ಯಕ್ರಮ ನಡಿಸಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಕಲೆಯನ್ನು ಸಾವಿರಾರು ಜನ ನೋಡಿ ಮೆಚ್ಚಿದ್ದಾರೆ. ಕೆಂಭಾವಿ ಪಟ್ಟಣದಲ್ಲಿ ಚಂಪಾ ಆರ್ಟ ಗ್ಯಾಲರಿಯನ್ನು ಸ್ಥಾಪಿಸಿರುವ ಇವರು ಇದರಿಂದ ತಮ್ಮ ಚಿತ್ರಕಲೆಯನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಈ ಆರ್ಟ ಗ್ಯಾಲರಿಗೆ ವಿವಿಧ ಮಠಾಧೀಶರು, ಉನ್ನತ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಅನೇಕರು ಭೇಟೆ ನೀಡಿ ಇವರ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
” ಇವೆಲ್ಲವೂ ಕೂಡ ನಮ್ಮ ತಂದೆ ಅವರಿಂದ ಬಳುವಳಿಯಾಗಿ ಬಂದಿರುವಂತಹ ಕಲೆಗಳು, ನಾನು ಬಾಲ್ಯದಿಂದಲೂ ಚಿತ್ರ ಬಿಡಿಸುವ ಹುಚ್ಚು , ಚಿತ್ರಕಲೆಯಲ್ಲಿ ಪದವಿ ಪಡೆದ್ದಿದ್ದೇನೆ. ಪ್ರತಿನಿತ್ಯ ಪ್ರಯತ್ನ ಮಾಡುವ ಮುಖಾಂತರ ಹೊಸ_ಹೊಸ ರೀತಿಯ ಚಿತ್ರ ಕಲೆಗಳನ್ನು ಬಿಡಿಸುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ, ಹಲವಾರು ಕಲಾವಿದರು ಇದ್ದಾರೆ  ಸರಕಾರ ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮೂಲಕ ಹಾಗೂ ಪ್ರೋತ್ಸಾಹ ಧನ ನೀಡುವ ಮುಖಾಂತರ ಕಲಾವಿದರನ್ನು ಗುರುತಿಸಬೇಕು ..”
                                _ಹಳ್ಳೇರಾವ ಕುಲಕರ್ಣಿ. ಕಲಾವಿದರು ಕೆಂಭಾವಿ 

Leave a Reply

Your email address will not be published. Required fields are marked *

error: Content is protected !!