ಉದಯವಾಹಿನಿ, ಬಾಲಿವುಡ್‌ನ ಬೆಬೋ, ಹಾಟ್ ಬ್ಯೂಟಿ, ಪಡ್ಡೆ ಹುಡುಗರ ಪಾಲಿನ ಪಾರಿಜಾತ ನೋರಾ ಫತೇಹಿ ಸೌತ್‌ನ ಸಿನಿಮಾದಲ್ಲಿ ಸೊಂಟ ಬಳುಕಿಸಲು ರೆಡಿಯಾಗಿದ್ದಾರೆ. ಹೀಗಂದು ಸುದ್ದಿ ಕಾಲಿವುಡ್‌ನಲ್ಲಿ ಜೋರಾಗಿ ಕೇಳಿ ಬರುತ್ತಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡುತ್ತಿರುವ ಜೈಲರ್-2 ಸಿನಿಮಾದಲ್ಲಿ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್‌ಕುಮಾರ್ ಕಾಂಬಿನೇಷನ್‌ನಲ್ಲಿ ಜೈಲರ್ ಪಾರ್ಟ್-1 ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಸಿಕ್ವೇಲ್ ಈಗ ಭರ್ಜರಿ ಸೌಂಡ್ ಮಾಡ್ತಿದೆ. ಇತ್ತೀಚೆಗೆ ಈ ಸಿನಿಮಾದ ತಾರಾಗಣದಲ್ಲಿ ಬಾಲಿವುಡ್‌ನ ಖ್ಯಾತ ನಟಿ ವಿದ್ಯಾ ಬಾಲನ್ ಸೇರಿಕೊಂಡಿದ್ದರು. ಇದೀಗ ಮತ್ತೊಂದು ಹ್ಯಾಪಿ ನ್ಯೂಸ್ ಚಿತ್ರತಂಡದಿಂದ ಬಂದಿದೆ. ಬಾಲಿವುಡ್‌ನಲ್ಲಿ ತಮ್ಮ ವಿಭಿನ್ನ ಹಾಗೂ ವಿಶಿಷ್ಟ ಹಾಡುಗಳಿಂದ ಗಮನ ಸೆಲೆದಿರುವ ಹಾಟ್ ಬ್ಯೂಟಿ ನೋರಾ ಫತೇಹಿ ತಲೈವಾ ಜೊತೆ ಹೆಜ್ಜೆ ಹಾಕಲಿದ್ದಾರೆ. ಮಲ್ಟಿಸ್ಟಾರರ್ ಇರುವ ಜೈಲರ್-2 ಸಿನಿಮಾಗೆ ಸಾಕಷ್ಟು ವಿಶೇಷತೆಗಳಿಂದ ಮತ್ತಷ್ಟು ಗಮನ ಸೆಳೆಯುತ್ತಿದೆ.
