
ಉದಯವಾಹಿನಿ,ಚಿಂಚೋಳಿ: ಕಳೆದ ಕೆಲದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರ ನೀಡುವಂತೆ ಶಾಸಕ ಡಾ.ಅವಿನಾಶ ಜಾಧವ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ತಾಲ್ಲೂಕಿನ ಗಾರಂಪಳ್ಳಿ,ಕನಕಪೂರ,ತಾದಲಾಪುರ,ಗ್ರಾ ಮಗಳಿಗೆ ತೆರಳುವ ಸೇತುವೆಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಗ್ರಾಮಗಳಿಗೆ ತಾಲ್ಲೂಕಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ತದನಂತರ ಮಾತನಾಡಿದ ಅವರು,ಗ್ರಾಮಸ್ಥರು ಸೇತುವೆ ಮೇಲ್ದರ್ಜೆಗೆರಿಸುವಂತೆ ಬೇಡಿಕೆಯಿದೆ,ಈಗಾಗಲೇ ಸೇತುವೆಗಳು ಮೇಲ್ದರ್ಜೆಗೆರಿಸಲು ಕ್ರೀಯಾಯೋಜನೆ ಸಿದ್ದಪಡಿಸಲಾಗಿದೆ ಟೆಂಡರ್ ಹಂತದಲ್ಲಿವೆ ಆದಷ್ಟೂ ಶೀಘ್ರದಲ್ಲೇ ಸೇತುವೆಗಳು ನಿರ್ಮಾಣ ಮಾಡಲಾಗುವುದು.
ಹವಾಮಾನ ಇಲಾಖೆಯು ಇನ್ನೂ ಮಳೆಯಾಗುವ ಮುನ್ಸೂಚನೆ ನೀಡಿದ್ದು ನದಿಯ ಸಮೀಪ ಇರುವ ಗ್ರಾಮದ ಜನರು ಯಾರೂ ಬಟ್ಟೆ ಓಗೆಯಲು,ದನಕರುಗಳು ಮೇಯಿಸಲು ಹೋಗಬಾರದು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ :ತಹಸೀಲ್ದಾರ್ ವಿರೇಶ ಮುಳಗುಂದಮಠ,ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ತಾಪಂ.ಇಓ ಶಂಕರ ರಾಠೋಡ್,ಎಂಐ ಎಇಇ ಶಿವಶರಣಪ್ಪಾ ಕೇಶ್ವಾರ,ಪಿ.ಆರ್.ಇ ಎಇಇ ರಾಜೇಶ ಪಾಟೀಲ,ಟಿಹೆಚ್ಓ ಮಹ್ಮುದ್ ಗಫಾರ,ಕೃಷಿ ಎಡಿ ವೀರಶೇಟ್ಟಿ ರಾಠೋಡ್,ಪಿಡಿಓ ಯಲಗೊಂಡ ಪೂಜಾರಿ ಹಾಗೂ ಗೋವಿಂದರೆಡ್ಡಿ,ಮತ್ತು ರಾಮರೆಡ್ಡಿ ಚಿಮ್ಮನಚೋಡ,ಕೆಎಂ ಬಾರಿ,ಪ್ರೇಮಸಿಂಗ್ ಜಾಧವ,ರಾಜು ಪವ್ಹಾರ,ಅಮರ ಲೋಡನೂರ್, ಅನೇಕರಿದ್ದರು.
