ಉದಯವಾಹಿನಿ, ಕಲಬುರಗಿ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಮಾಡಿಕೊಂಡಿರುವ ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ. ಮೃತಳನ್ನು ಅನಸೂಯಾ ಅವಿನಾಶ್ ಆಕಡೆ (26) ಎಂದು ಗುರುತಿಸಲಾಗಿದೆ. ಅನಸೂಯಾ ತನ್ನ ಅತ್ತೆ ಮಗ ಅವಿನಾಶ್ ಅವರನ್ನು ಪ್ರೀತಿಸಿ, ಎರಡು ತಿಂಗಳ ಹಿಂದೆ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು.
ಮದುವೆಯ ನಂತರ ಗಂಡನೊಂದಿಗೆ ಹಳ್ಳಿಯಲ್ಲಿ ವಾಸಿಸುವುದಕ್ಕೆ ಅನಸೂಯಾಗೆ ಇಷ್ಟವಿರಲಿಲ್ಲ. ಆಕೆಯ ಮೂವರು ಸಹೋದರಿಯರು ಮದುವೆ ಬಳಿಕ ಬೆಂಗಳೂರು ಹಾಗೂ ಮುಂಬೈ ಮುಂತಾದ ಮಹಾನಗರಗಳಲ್ಲಿ ವಾಸವಾಗಿದ್ದರೆ, ತಾನು ಚಿಕ್ಕಹಳ್ಳಿಯಲ್ಲಿ ಜೀವನ ನಡೆಸಬೇಕಾಗಿದೆಯಲ್ಲ ಎಂದು ಬೇಸರಗೊಂಡಿದ್ದಳು ಎನ್ನಲಾಗಿದೆ.

ಹಳ್ಳಿಯಲ್ಲಿ ಇರಲು ಇಷ್ಟವಿಲ್ಲದೆ ಯುವತಿ ಮಾನಸಿಕವಾಗಿ ನೊಂದಿದ್ದಳು. ಈ ಒತ್ತಡದಿಂದಲೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ.

Leave a Reply

Your email address will not be published. Required fields are marked *

error: Content is protected !!