ಉದಯವಾಹಿನಿ, : 2025ರ ಕನ್ನಡ ಚಿತ್ರರಂಗದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’. ಕಳೆದ ಡಿಸೆಂಬರ್ 25ರಂದು ಕ್ರಿಸ್‌ಮಸ್ ಕೊಡುಗೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಪಡೆದಿತ್ತು. ಮಾಸ್ ಪ್ರೇಕ್ಷಕರಿಂದ ಹಿಡಿದು ವಿಮರ್ಶಕರವರೆಗೆ ಪಾಸಿಟಿವ್ ಅಭಿಪ್ರಾಯ ಗಳಿಸಿದ್ದ ಈ ಸಿನಿಮಾ, ಇದೀಗ ಜಿಯೋ ಹಾಟ್‌ಸ್ಟಾರ್ ಓಟಿಟಿ ವೇದಿಕೆಯಲ್ಲಿ ಇಂದಿನಿಂದ ಪ್ರಸಾರ ಆರಂಭಿಸಿದೆ.
ಸಸ್ಪೆಂಡ್ ಆಗಿರುವ ಖಡಕ್ ಪೊಲೀಸ್ ಅಧಿಕಾರಿ ಅಜಯ್ ಮಾರ್ಕಂಡೇಯ ಅಲಿಯಾಸ್ ಮಾರ್ಕ್ ಸುತ್ತ ಈ ಕಥೆ ಸಾಗುತ್ತದೆ. ರಾಜಕಾರಣಿಗಳು ಮತ್ತು ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಮಾರ್ಕ್ ಮುಂದೆ ಒಂದು ದೊಡ್ಡ ಸವಾಲು ಎದುರಾಗುತ್ತದೆ. ಕೇವಲ 36 ಗಂಟೆಗಳ ಕಾಲಾವಕಾಶದಲ್ಲಿ ಮಕ್ಕಳ ಕಳ್ಳಸಾಗಣೆ, ಡ್ರಗ್ಸ್ ಮಾಫಿಯಾ ಮತ್ತು ರಾಜಕೀಯ ಷಡ್ಯಂತ್ರದ ಜಾಲವನ್ನು ಭೇದಿಸುವ ರೋಚಕ ಹಾದಿಯೇ ಈ ಸಿನಿಮಾ.
ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರಕ್ಕೆ ಸತ್ಯಜ್ಯೋತಿ ಫಿಲಂಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬಂಡವಾಳ ಹೂಡಿವೆ.
ಶೈನ್ ಟಾಮ್ ಚಾಕೊ, ವಿಕ್ರಾಂತ್, ಯೋಗಿ ಬಾಬು, ನಿಶ್ವಿಕಾ ನಾಯ್ಡು, ಗುರು ಸೋಮಸುಂದರಂ, ರೋಷನಿ ಪ್ರಕಾಶ್ ಮುಂತಾದ ಘಟಾನುಘಟಿಗಳು ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಲಭ್ಯವಿರುವ ‘ಮಾರ್ಕ್’ ಅನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಈಗಲೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
