ಉದಯವಾಹಿನಿ, : ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ ಆದ ಬಳಿಕ ಗಿಲ್ಲಿ ನಟನಸಖತ್ ಬ್ಯುಸಿ ಆಗಿದ್ದಾರೆ . ಬಿಗ್ ಬಾಸ್ನಿಂದ ಗೆಲುವು ಒಂದು ಕಡೆಯಾದರೆ, ಅವರಿಗೆ ಸಿಕ್ಕ ಜನಪ್ರಿಯತೆ ಮತ್ತೊಂದು ಕಡೆ. ಇದರ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ, ಷೋರೂಮ್ಗಳ ಉದ್ಘಾಟಕರಾಗಿ ಗಿಲ್ಲಿನಟನಿಗೆ ಆಹ್ವಾನದ ಮೇಲೆ ಆಹ್ವಾನ ಬರುತ್ತಿದೆ .
ಚಿನ್ನಾಭರಣ ಉದ್ಯಮಿ ಶರವಣ ಅವರು, ಬಿಗ್ಬಾಸ್ನಲ್ಲಿ ಗಿಲ್ಲಿನಟನಿಗೆ 20 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಇದೀಗ ಅವರು ತಮ್ಮ ಚಿನ್ನದ ಮಳಿಗೆಯೊಂದರ ಉದ್ಘಾಟನೆಗೆ ಗಿಲ್ಲಿನಟ ಅವರನ್ನು ಕರೆದಿದ್ದಾರೆ.ಈ ಸಂದರ್ಭದಲ್ಲಿ ಅವರು ಗಿಲ್ಲಿನಟನಿಗೆ ಭರ್ಜರಿ ಚಿನ್ನದ ಸರವನ್ನು ತೊಡಿಸಿದ್ದಾರೆ. ಗಿಲ್ಲಿ ನಟ ಇದನ್ನು ನೋಡಿ ಸುಸ್ತಾದಂತೆ ಕಾಣಿಸುತ್ತಿದೆ. ಇದೇ ಸಮಯದಲ್ಲಿ ಗಿಲ್ಲಿನಟನ ಕಿವಿಯಲ್ಲಿ ಶರವಣ ಅವರು ಏನೋ ಕಿವಿಮಾತು ಹೇಳಿದ್ದಾರೆ. ಆ ಚಿನ್ನದ ಸರವನ್ನು ಉದ್ಘಾಟನೆಯ ಸಮಯದಲ್ಲಿ ತೊಡಿಸಿದ್ದು, ಸಾಮಾನ್ಯವಾಗಿ ಅದನ್ನು ಉದ್ಘಾಟನೆ ಬಳಿಕ ಅವರು ಹಿಂದಿರುಗಿಸಬೇಕಾಗುತ್ತದೆ. ಇದನ್ನೇ ಕಿವಿಯಲ್ಲಿ ಹೇಳಿರಬಹುದು!ಒಟ್ಟಿನಲ್ಲಿ ಗಿಲ್ಲಿಯ ಹವಾ ಮುಂದುವರೆದಿದೆ.
