ಉದಯವಾಹಿನಿ, : ಹೆಲ್ದಿ ಅಂದ್ರೆ ರುಚಿ ಕಡಿಮೆ ಅಂತಲ್ಲ… ಅದಕ್ಕೆ ಬೆಸ್ಟ್ ಉದಾಹರಣೆ ರಾಗಿ ಹಲ್ವಾ. ನಮ್ಮ ಹಳ್ಳಿಯ ಅಡುಗೆಮನೆಯ ಸುಗಂಧ, ಅಜ್ಜಿ ಕೈರುಚಿ ಸಿಹಿ ನೆನಪುಗಳನ್ನು ತಾಜಾ ಮಾಡಿಸುವ ಈ ಹಲ್ವಾ, ಶಕ್ತಿ ನೀಡುವ ರಾಗಿ ಧಾನ್ಯದಿಂದ ತಯಾರಾಗುತ್ತೆ. ಸಿಂಪಲ್ ಸಿಹಿ ತಿನ್ಬೇಕು ಅಂದಾಗ ಇದು ಒಳ್ಳೆಯ ಆಯ್ಕೆ.
ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು – 1 ಕಪ್
ಬೆಲ್ಲ – 1 ಕಪ್
ನೀರು – 2½ ಕಪ್
ತುಪ್ಪ – 3–4 ಟೇಬಲ್ ಸ್ಪೂನ್
ಏಲಕ್ಕಿ ಪುಡಿ – ½ ಟೀ ಸ್ಪೂನ್
ಗೋಡಂಬಿ, ಬಾದಾಮಿ – ಸ್ವಲ್ಪ (ಐಚ್ಛಿಕ)
ತಯಾರಿಸುವ ವಿಧಾನ
ಮೊದಲು ಬಾಣಲೆಯಲ್ಲಿ ರಾಗಿ ಹಿಟ್ಟನ್ನು ಮಧ್ಯಮ ಉರಿಯಲ್ಲಿ ಸುಗಂಧ ಬರೋವರೆಗೆ ಹುರಿಯಬೇಕು. ಕಪ್ಪಾಗದಂತೆ ನಿರಂತರವಾಗಿ ಕೈಯಾಡಿಸುವುದು ಮುಖ್ಯ. ಬೇರೆ ಪಾತ್ರೆಯಲ್ಲಿ ಬೆಲ್ಲಕ್ಕೆ ನೀರು ಹಾಕಿ ಕುದಿಸಿ, ಕರಗಿದ ನಂತರ ಸೋಸಿ ತೆಗೆದುಕೊಳ್ಳಿ.ಈಗ ಹುರಿದ ರಾಗಿ ಹಿಟ್ಟಿಗೆ ಬೆಲ್ಲದ ನೀರನ್ನು ನಿಧಾನವಾಗಿ ಸೇರಿಸುತ್ತಾ ಗಂಟಾಗದಂತೆ ಚೆನ್ನಾಗಿ ಕಲಸಿ. ಮಧ್ಯಮ ಉರಿಯಲ್ಲಿ ನಿರಂತರವಾಗಿ ಕಲಸುತ್ತಾ ಇದ್ದರೆ ಮಿಶ್ರಣ ಗಟ್ಟಿಯಾಗಲು ಶುರುವಾಗುತ್ತದೆ. ಈ ಹಂತದಲ್ಲಿ ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸಿ.ಹಲ್ವಾ ಬಾಣಲೆ ಬಿಡಲು ಆರಂಭಿಸಿದಾಗ ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿ ಸೇರಿಸಿ ಇನ್ನೊಮ್ಮೆ ಕಲಸಿ.
