ಉದಯವಾಹಿನಿ, ಸಾಮಾನ್ಯವಾಗಿ ನಾವು ಅಕ್ಕಿ ಪಡ್ಡು, ರವೆ ಪಡ್ಡು ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ಸ್ಟಫ್ಡ್ ಪಡ್ಡನ್ನು ಕೂಡ ಸಾವಿಸುತ್ತೇವೆ. ಇದರ ಹೊರತಾಗಿಯೂ ಕೆಲವು ವಿಭಿನ್ನ, ಸುಲಭವಾದ ಪಡ್ಡನ್ನು ತಯಾರಿಸಬಹುದು. ಆ ಪೈಕಿ ಜೋಳದ ಹಿಟ್ಟಿನ ಪಡ್ಡು ಕೂಡ ಒಂದು. ಒಮ್ಮೆ ತಯಾರಿಸಿ ನೋಡಿ, ನಿಜಕ್ಕೂ ಬಾಯಲ್ಲಿ ನೀರು ಬರುವಂತೆ ಮಾಡುತ್ತದೆ.
ಬೇಕಾಗುವ ಪದಾರ್ಥಗಳು:
ಜೋಳದ ಹಿಟ್ಟು
ಉದ್ದಿನ ಬೇಳೆ
ಮೆಂತ್ಯ
ಉಪ್ಪು
ಎಣ್ಣೆ
ಸಾಸಿವೆ
ಕರಿಬೇವಿನ ಎಲೆ
ಹಸಿರು ಮೆಣಸಿನಕಾಯಿ
ಶುಂಠಿ
ಈರುಳ್ಳಿ
ಮಾಡುವ ವಿಧಾನ: ಮೊದಲಿಗೆ ಉದ್ದಿನಬೇಳೆ ಹಾಗೂ ಮೆಂತ್ಯವನ್ನು 4 ಗಂಟೆ ನೀರಿನಲ್ಲಿ ನೆನೆಸಿಡಿ. ಬಳಿಕ ಸ್ವಲ್ಪ ನೀರು ಸೇರಿಸಿ, ನುಣ್ಣನೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟಿಗೆ ಜೋಳದ ಹಿಟ್ಟು ಹಾಗೂ ಉಪ್ಪು ಹಾಕಿ, ಮಿಶ್ರಣ ಮಾಡಿ. ಈ ಹಿಟ್ಟನ್ನು ರಾತ್ರಿ ತಯಾರಿಸಿ, , ಬೆಳಗ್ಗಿನವರೆಗೆ ಮುಚ್ಚಿಡಿ. ಬೆಳಗ್ಗೆ ನೀರು ಸೇರಿಸಿ, ಮಿಶ್ರಣ ಮಾಡಿ. ಈಗ ಎಣ್ಣೆ ಹಾಕಿ, ಬಳಿಕ ಸಾಸಿವೆ, ಉದ್ದಿನಬೇಳೆ ಹಾಕಿ, ಬಳಿಕ ಕರಿಬೇವಿನ ಎಲೆ, ಮೆಣಸಿನ ಕಾಯಿ, ಶುಂಠಿ ಹಾಗೂ ಈರುಳ್ಳಿ ಸೇರಿಸಿ, 2-3 ನಿಮಿಷ ಹುರಿಯಿರಿ. ಈಗ ಒಗ್ಗರಣೆಯನ್ನು ಹಿಟ್ಟಿಗೆ ಹಾಕಿ, ಮಿಶ್ರಣ ಮಾಡಿ ಬಳಿಕ ಪಡ್ಡು ಮಣೆಗೆ ಎಣ್ಣೆ ಸವರಿ, ಹಿಟ್ಟು ಅನ್ನು ಸುರಿದು ಮಧ್ಯಮ ಉರಿಯಲ್ಲಿ ಪಡ್ಡುಗಳನ್ನು ಬೇಯಿಸಿ.ಒಂದು 5 ನಿಮಿಷ ಬೇಯಿಸಿಕೊಂಡರೆ ಪಡ್ಡು ತಯಾರಾಗುತ್ತದೆ ಇದನ್ನು ಚಟ್ನಿಯೊಂದಿಗೆ ಸವಿಯಿರಿ
