ಉದಯವಾಹಿನಿ, ಅಡುಗೆಮನೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ಪದಾರ್ಥಗಳಲ್ಲಿ ತೆಂಗಿನಕಾಯಿ ಪ್ರಮುಖವಾದದ್ದು. ಸಾಂಬಾರ್, ಪಲ್ಯ, ಚಟ್ನಿ, ಪಾಯಸ ಎಲ್ಲದಕ್ಕೂ ತೆಂಗಿನಕಾಯಿ ಬೇಕೇ ಬೇಕು. ಆದರೆ ಒಮ್ಮೆ ತೆಂಗಿನಕಾಯಿ ಒಡೆದ ಬಳಿಕ ಕೆಲವೇ ದಿನಗಳಲ್ಲಿ ದುರ್ವಾಸನೆ ಬರುತ್ತದೆ, ಹುಳು ಬೀಳುತ್ತದೆ ಅಥವಾ ಒಣಗಿಹೋಗುತ್ತೆ. ಸ್ವಲ್ಪ ಜಾಗ್ರತೆ ಮತ್ತು ಸರಿಯಾದ ವಿಧಾನಗಳನ್ನು ಅನುಸರಿಸಿದರೆ, ಒಡೆದ ತೆಂಗಿನಕಾಯಿಯನ್ನೂ ತಿಂಗಳುಗಟ್ಟಲೇ ಬಳಸಬಹುದು. ಅದಕ್ಕೆ ಸಹಾಯ ಮಾಡುವ ಸುಲಭ ಮತ್ತು ಪರಿಣಾಮಕಾರಿ ಕಿಚನ್ ಟಿಪ್ಸ್ ಇಲ್ಲಿವೆ.
ಒಡೆದ ತೆಂಗಿನಕಾಯಿ ತುಂಡುಗಳನ್ನು ಒಂದು ಗಾಳಿರಹಿತ ಪಾತ್ರೆಯಲ್ಲಿ ಹಾಕಿ, ಅವು ಮುಳುಗುವಷ್ಟು ನೀರು ಸೇರಿಸಿ. ಪ್ರತಿದಿನ ನೀರನ್ನು ಬದಲಿಸಿದರೆ ತೆಂಗಿನಕಾಯಿ ಹೆಚ್ಚು ದಿನ ಫ್ರೆಶ್ ಆಗಿರುತ್ತದೆ.
ಫ್ರೀಜರ್ ವಿಧಾನ – ದೀರ್ಘಕಾಲದ ಪರಿಹಾರ:
ತೆಂಗಿನಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಜಿಪ್ ಲಾಕ್ ಬ್ಯಾಗ್ ಅಥವಾ ಗಾಳಿರಹಿತ ಡಬ್ಬಿಯಲ್ಲಿ ಫ್ರೀಜರ್‌ನಲ್ಲಿ ಇಡಿ. ಈ ರೀತಿ ಇಟ್ಟರೆ 1–2 ತಿಂಗಳು ಸುಲಭವಾಗಿ ಉಳಿಸಬಹುದು.
ತೆಂಗಿನಕಾಯಿಯನ್ನು ತುರಿದು, ಚಿಕ್ಕ ಚಿಕ್ಕ ಪ್ಯಾಕ್‌ಗಳಾಗಿ ಫ್ರೀಜರ್‌ನಲ್ಲಿ ಇಡಿ. ಬೇಕಾದಷ್ಟು ಮಾತ್ರ ತೆಗೆದುಕೊಂಡು ಬಳಸಬಹುದು, ವ್ಯರ್ಥವೂ ಆಗೋದಿಲ್ಲ.ಒಡೆದ ಭಾಗದ ಮೇಲೆ ಸ್ವಲ್ಪ ತೆಂಗಿನ ಎಣ್ಣೆ ಲೇಪಿಸಿ ಫ್ರಿಜ್‌ನಲ್ಲಿ ಇಟ್ಟರೆ, ಒಣಗುವಿಕೆ ಕಡಿಮೆಯಾಗುತ್ತದೆ ಮತ್ತು ದುರ್ವಾಸನೆ ಬರುವುದಿಲ್ಲ.

ತೆಂಗಿನಕಾಯಿ ತುಂಡುಗಳನ್ನು ಸ್ವಲ್ಪ ಹೊತ್ತು ನೆರಳಲ್ಲಿ ಒಣಗಿಸಿ ನಂತರ ಫ್ರಿಜ್‌ನಲ್ಲಿ ಇಟ್ಟರೆ ಶೆಲ್ಫ್ ಲೈಫ್ ಹೆಚ್ಚುತ್ತದೆ.
ದುರ್ವಾಸನೆ ಬಂದ ಅಥವಾ ಬಣ್ಣ ಬದಲಾದ ತೆಂಗಿನಕಾಯಿಯನ್ನು ಬಳಸಬೇಡಿ. ಆರೋಗ್ಯಕ್ಕಿಂತ ತೆಂಗಿನಕಾಯಿ ದೊಡ್ಡದೇನೂ ಅಲ್ಲ.

ಸರಿಯಾದ ಸಂಗ್ರಹಣೆ ತಿಳಿದಿದ್ದರೆ, ಒಡೆದ ತೆಂಗಿನಕಾಯಿಯೂ ನಿಮ್ಮ ಅಡುಗೆಮನೆಯಲ್ಲಿ ತಿಂಗಳುಗಟ್ಟಲೇ ಉಪಯೋಗಕ್ಕೆ ಬರಬಹುದು.

Leave a Reply

Your email address will not be published. Required fields are marked *

error: Content is protected !!