ಉದಯವಾಹಿನಿ, ಕ್ಯಾರಮ್ ಸೀಡ್ಸ್ ಅಥವಾ ಬಿಷಪ್ಸ್ ವೀಡ್ ಎಂದೂ ಕರೆಯಲಾಗುವ ಓಮ (ಅಜವೈನ್) ಕಾಳುಗಳು ವೈಜ್ಞಾನಿಕವಾಗಿ ಟ್ರಾಕಿಸ್ಪರ್ಮಮ್ ಎಂದು ಕರೆಯಲಾಗುವ ಸಸ್ಯದ ಬೀಜಗಳಾಗಿದ್ದು, ಭಾರತೀಯ ಮತ್ತು ಮಧ್ಯಪ್ರಾಚ್ಯದ ಅಡಿಗೆ ಮನೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ.
ತೀಕ್ಷ್ಯ ಹಾಗೂ ವಿಶಿಷ್ಟ ಪರಿಮಳ, ಸ್ವಲ್ಪ ಕಹಿ ಮತ್ತು ಕಟು ರುಚಿಯನ್ನು ಹೊಂದಿರುವ ಓಮ ಕಾಳುಗಳು ಸಮೃದ್ಧ ಸಾರಭೂತ ತೈಲಗಳು, ಖನಿಜಗಳು ಮತ್ತು ವಿಟಾಮಿನ್ಗಳನ್ನು ಒಳಗೊಂಡಿರುವುದರಿಂದ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿಯೂ ವ್ಯಾಪಕವಾಗಿ ಬಳಕೆಯಾಗುತ್ತವೆ. ಈ ಎಲ್ಲ ಬಳಕೆಗಳ ಹೊರತಾಗಿ ಓಮ ಕಾಳು ತನ್ನ ಆರೋಗ್ಯವರ್ಧಕ ಗುಣಗಳಿಂದಾಗಿಯೂ ಹೆಸರಾಗಿದೆ.
ಆ್ಯಸಿಡಿಟಿ ಅಥವಾ ಆಮ್ಮಿಯತೆ ಮತ್ತು ಎದೆಉರಿಯಿಂದ ಪಾರಾಗಲು ಸಾಂಪ್ರದಾಯಿಕವಾಗಿ ಓಮ ಕಾಳುಗಳನ್ನು ಬಳಸಲಾಗುತ್ತಿದೆ. ಓಮ ಕಾಳುಗಳ ನೀರಿನ ಸೇವನೆಯು ಹೊಟ್ಟೆಯಲ್ಲಿ ಆಮ್ಮಿಯ ಮಟ್ಟಗಳನ್ನು ತಗ್ಗಿಸಲು ನೆರವಾಗುತ್ತದೆ. ಆ್ಯಸಿಡಿಟಿ ಅಥವಾ ಆಮ್ಮಿಯತೆ ಮತ್ತು ಎದೆಉರಿಯಿಂದ ಪಾರಾಗಲು ಸಾಂಪ್ರದಾಯಿಕವಾಗಿ ಓಮ ಕಾಳುಗಳನ್ನು ಬಳಸಲಾಗುತ್ತಿದೆ. ಓಮ ಕಾಳುಗಳ ನೀರಿನ ಸೇವನೆಯು ಹೊಟ್ಟೆಯಲ್ಲಿ ಆಮ್ಮಿಯ ಮಟ್ಟಗಳನ್ನು ತಗ್ಗಿಸಲು ನೆರವಾಗುತ್ತದೆ. ಅಸ್ತಮಾ, ಬ್ರಾಂಕೈಟಿಸ್ ಮತ್ತು ಕೆಮ್ಮಿನಂತಹ ಉಸಿರಾಟದ ತೊಂದರೆಗಳಿಂದ ಬಳಲುತ್ತಿರುವ ಜನರಿಗೆ ಓಮ ಕಾಳುಗಳ ನೀರಿನ ಸೇವನೆ ಉಪಯುಕ್ತವಾಗಿದೆ.
ಶ್ವಾಸನಾಳವನ್ನು ಸ್ವಚ್ಛಗೊಳಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಉಸಿರಾಟವನ್ನು ಸುಗಮಗೊಳಿಸಲು ನೆರವಾಗಬಲ್ಲದು. ಓಮ ಕಾಳು ಜೀರ್ಣ ವ್ಯವಸ್ಥೆಯನ್ನು ಉತ್ತಮಗಳಿಸುವ ಮೂಲಕ ಮೆಟಾಬಲಿಸಂ ಅಥವಾ ಚಯಾಪಚಯವನ್ನು ಹೆಚ್ಚಿಸುತ್ತದೆ. ಪೋಷಕಾಂಶಗಳ ಉತ್ತಮ ಹೀರುವಿಕೆಗೆ ನೆರವಾಗುತ್ತದೆ ಮತ್ತು ಚಯಾಪಚಯ ದರ ಹಾಗೂ ಶಕ್ತಿ ಮಟ್ಟಗಳನ್ನು ಹೆಚ್ಚಿಸುತ್ತದೆ. ಮುಟ್ಟಿನ ಸಮಯದಲ್ಲಿ ನೀರಿನಲ್ಲಿ ನೆನಸಿಟ್ಟ ಓಮ ಕಾಳುಗಳನ್ನು ಸೇವಿಸುವ ಮೂಲಕ ನೋವು ಕಡಿಮೆ ಮಾಡಲು ಸಹಕರಿಸುತ್ತದೆ. ಓಮ ಕಾಳುಗಳು ಸೆಳೆತ ಪ್ರತಿರೋಧಕ ಗುಣಗಳನ್ನು ಹೊಂದಿದ್ದು, ಇವು ಸ್ನಾಯುಗಳು ವಿಶ್ರಮಿಸಲು ಮತ್ತು ನೋವನು ಕಡಿಮೆ ಮಾಡಲು ನೆರವಾಗುತ್ತವೆ.

Leave a Reply

Your email address will not be published. Required fields are marked *

error: Content is protected !!