ಉದಯವಾಹಿನಿ , ಬೀಜಿಂಗ್: ಭಾರತ ಮತ್ತು ನಾವು ಒಳ್ಳೆಯ ಗೆಳೆಯರಾಗಿದ್ದು, ಉತ್ತಮ ನೆರೆಹೊರೆಯ ರಾಷ್ಟ್ರಗಳಾಗಿವೆ. ಎರಡೂ ದೇಶಗಳು ಒಟ್ಟಾಗಿ ಸಾಗುವುದರಿಂದ ಉಭಯ ದೇಶಗಳಿಗೂ ಅನುಕೂಲವಾಗಲಿದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸೋಮವಾರ ಹೇಳಿದ್ದಾರೆ.77ನೇ ಗಣರಾಜೋತ್ಸವದ ಪ್ರಯುಕ್ತ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ, ಷಿ ಜಿನ್‌ಪಿಂಗ್ ಅವರು ಶುಭಾಶಯವನ್ನು ಕೋರಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಸಂಬಂಧವು ಉಭಯ ದೇಶಗಳ ನಾಗರಿಕರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಹಾಗೂ ಅದು ಜಾಗತಿಕ ಶಾಂತಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಚೀನಾ, ಭಾರತವನ್ನು ಉತ್ತಮ ನೆರೆಹೊರೆಯ ದೇಶ ಎಂದು ಭಾವಿಸಿದ್ದು, ಉಭಯ ದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಒಟ್ಟಾಗಿ ಹೆಜ್ಜೆ ಇಡಬೇಕಾಗಿದೆ ಎಂದು ತಿಳಿಸಿದ್ದಾರೆ.
2020ರಲ್ಲಿ ಲಡಾಖ್‌ನ ಎಲ್‌ಎಸಿ ಬಳಿ ಉಂಟಾದ ಸಂಘರ್ಷದ ನಂತರ, ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿತ್ತು. 2025ರ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿ ಹಾಗೂ ಷಿ ಜಿನ್‌ಪಿಂಗ್ ನಡುವೆ ನಡೆದ ಮಾತುಕತೆಯ ನಂತರ, ದ್ವಿಪಕ್ಷೀಯ ಸಂಬಂಧದಲ್ಲಿ ಸುಧಾರಣೆ ಕಾಣುತ್ತಿದೆ.
