ಉದಯವಾಹಿನಿ , ಲಾಸ್ ವೆಗಾಸ್: ಅಮೆರಿಕದಲ್ಲಿ ಹಿಮದೊಂದಿಗೆ ಬಿರುಗಾಳಿ ಬೀಸುತ್ತಿರುವುದರಿಂದ ದೇಶದಾದ್ಯಂತ 14,100ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಈ ಪೈಕಿ 10 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟವು ಭಾನುವಾರ ನಿಗದಿಯಾಗಿತ್ತು. ‘ದಕ್ಷಿಣ ರಾಕಿ ಪರ್ವತಗಳಿಂದ ನ್ಯೂ ಇಂಗ್ಲೆಂಡ್‌ವರೆಗಿನ ಹಾದಿಯಲ್ಲಿ ವ್ಯಾಪಕವಾದ ಹಿಮ, ಹಿಮಪಾತ ಮತ್ತು ಘನೀಕೃತ ಮಳೆ ಬೀಳುತ್ತಿದ್ದು, ಸುಮಾರು 1.80 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ’ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.
