ಉದಯವಾಹಿನಿ, ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಕೇರಳ ಗಡಿಯಲ್ಲಿ ಸೋಮವಾರ ಸಿಕ್ಕಿಬಿದ್ದಿದ್ದ. ಜತೆಗೆ ಆತನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರದ ಎಸ್ಪಿ ಕುಶಾಲ್ ಚೌಕ್ಸೆ ಮಾಹಿತಿ ನೀಡಿದ್ದಾರೆ.
ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಆರೋಪದಲ್ಲಿ ಜ.14 ರಂದು ಎಫ್ಐಆರ್ ದಾಖಲಾಗಿತ್ತು. ನಂತರ ಆರೋಪಿ ರಾಜೀವ್ ಗೌಡ ಎಸ್ಕೇಪ್ ಆಗಿದ್ದರು. ಬೆಂಗಳೂರು ಬಿಟ್ಟು, ಬೇರೆ ಕಡೆ ಹೋಗಿದ್ದಾರೆ ಎಂಬ ಮಾಹಿತಿ ಇತ್ತು. ಈ ಬಗ್ಗೆ ಟ್ರೇಸ್ ಮಾಡಿದಾಗ ಆರೋಪಿ ಕೇರಳದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ಜತೆ ಇನ್ನೊಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜಿಪಿಎಸ್, ಫಾಸ್ಟ್ ಟ್ಯಾಗ್ ಆಧಾರದ ಮೇಲೆ ಆರೋಪಿಗಳನ್ನು ಶಿಡ್ಲಘಟ್ಟ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಅವರು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿ ಚಿಕ್ಕಮಗಳೂರಿನಿಂದ ಕೇರಳ ಕಡೆ ಹೋಗಿದ್ದರು. ರಾಜೀವ್ ಗೌಡ ಹಾಗೂ ಅವರ ಬ್ಯುಸಿನೆಸ್‌ ಪಾರ್ಟ್ನರ್, ಪರ್ನೀಚರ್ ಉದ್ಯಮಿ ಮೈಕೆಲ್ ರೆಗೋ ಮಾರುತಿ ಬ್ರೀಜಾ ಕಾರಿನಲ್ಲಿ ಇಬ್ಬರು ಸಿಕ್ಕಿದ್ದಾರೆ. ಶಿಡ್ಲಘಟ್ಟ ಠಾಣೆ, ಸೈಬರ್ ಠಾಣೆ, ಚಿಂತಾಮಣಿ ಠಾಣೆ ಇನ್ಸ್‌ಪೆಕ್ಟರ್ ತಂಡ ಸೇರಿ ಮೂರು ತಂಡಗಳು ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದರು.

ಪೌರಾಯುಕ್ತೆ ಧಮ್ಕಿ ಪ್ರಕರಣದಲ್ಲಿ ಮೊದಲು 2 ಎಫ್ಐಆರ್ ದಾಖಲಾಗಿತ್ತು. ಒಂದು ಪೌರಾಯುಕ್ತೆ, ಮತ್ತೊಂದು ಜೆಡಿಎಸ್ ಮುಖಂಡ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಕೇಸ್‌ ದಾಖಲಾಗಿತ್ತು. ಮತ್ತೊಂದು ಬೆದರಿಕೆ ಪತ್ರ ವಿಚಾರ ಎಫ್ಐಆರ್ ದಾಖಲಾಗಿದೆ. ಒಟ್ಟು ಮೂರು ಎಫ್ಐಆರ್ ದಾಖಲಾಗಿವೆ. ಶಿಡ್ಲಘಟ್ಟ ಪೌರಾಯುಕ್ತೆಗೆ ಧಮ್ಕಿ ಪ್ರಕರಣ; ತಲೆಮರೆಸಿಕೊಂಡಿದ್ದ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಕೊನೆಗೂ ಅರೆಸ್ಟ್‌

ಜ.16ಕ್ಕೆ ರಾಜೀವ್ ಗೌಡ ಮಂಗಳೂರಿಗೆ ಭೇಟಿ ನೀಡಿದ್ದರು. ನಂತರ ನಾಲ್ಕು ದಿನಗಳು ಅಲ್ಲಿಯೇ ತಂಗಿದ್ದರು. ಮಂಗಳೂರಿನಲ್ಲಿ ಕಾರು ಯಾಕೆ ಪಾರ್ಕಿಂಗ್ ಮಾಡಿದ್ದರು ಹಾಗೂ ಆಡಿಯೋ ವಿಚಾರ, ಮೊಬೈಲ್ ಬಗ್ಗೆ ತನಿಖೆ ಮಾಡಲಾಗುತ್ತಿದೆ. ತನಿಖೆಗೆ ರಾಜೀವ್ ಗೌಡ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!