ಉದಯವಾಹಿನಿ, 2023ರಲ್ಲಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದ ‘ಅನಿಮಲ್’ ಚಿತ್ರದ ಯಶಸ್ಸಿನ ನಂತರ, ಈಗ ಅದರ ಸೀಕ್ವೆಲ್ ‘ಅನಿಮಲ್ ಪಾರ್ಕ್’ ಬಗ್ಗೆ ಭಾರಿ ಕುತೂಹಲ ಮೂಡಿದೆ. ಚಿತ್ರದ ವಿವಾದಗಳು ಮತ್ತು ಟೀಕೆಗಳ ನಡುವೆಯೂ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಸರಣಿಯ ಎರಡನೇ ಭಾಗವನ್ನು ಘೋಷಿಸಿದ್ದರು. ಇದೀಗ ನಟ ರಣಬೀರ್ ಕಪೂರ್ ಈ ಚಿತ್ರದ ಚಿತ್ರೀಕರಣ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಣಬೀರ್ ಕಪೂರ್, “ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅದು ಪೂರ್ಣಗೊಂಡ ನಂತರ ಅನಿಮಲ್ ಸೀಕ್ವೆಲ್ ಕೈಗೆತ್ತಿಕೊಳ್ಳಲಿದ್ದಾರೆ. ಬಹುಶಃ 2027ರಲ್ಲಿ ‘ಅನಿಮಲ್ ಪಾರ್ಕ್’ ಚಿತ್ರೀಕರಣ ಆರಂಭವಾಗಬಹುದು,” ಎಂದು ತಿಳಿಸಿದ್ದಾರೆ. ಮೊದಲ ಭಾಗಕ್ಕಿಂತಲೂ ಈ ಬಾರಿ ಸಿನಿಮಾ ಹೆಚ್ಚು ಹಿಂಸಾತ್ಮಕವಾಗಿರಲಿದೆ ಎಂಬ ಸುಳಿವನ್ನು ಈಗಾಗಲೇ ನಿರ್ದೇಶಕರು ನೀಡಿದ್ದಾರೆ. ಒಟ್ಟಾರೆಯಾಗಿ, ಮುಂದಿನ ಎರಡು ವರ್ಷಗಳ ಕಾಲ ರಣಬೀರ್ ಕಪೂರ್ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದು, 2027ರಲ್ಲಿ ಅವರ ಮೋಸ್ಟ್ ವೈಲೆಂಟ್ ಅವತಾರ ‘ಅನಿಮಲ್ ಪಾರ್ಕ್’ ಮೂಲಕ ಮರಳಲಿದ್ದಾರೆ.
