ಉದಯವಾಹಿನಿ, ಇನ್‌ಸ್ಟೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಸಂಸ್ಥೆ ದಂಗಲ್ ಚಾಂಪಿಯನ್‌ಶಿಪ್ ಮರಳುತ್ತಿರುವುದನ್ನು ಘೋಷಿಸಿದ್ದು, 2026ರ ಆವೃತ್ತಿ ಫೆಬ್ರವರಿ 23, 2026ರಂದು ಹರಿಯಾಣದ ಹಿಸಾರ್‌ನ ಶಹೀದ್ ಮದನ್ ಲಾಲ್ ಧಿಂಗ್ರಾ ಮಲ್ಟಿಪರ್ಪಸ್ ಹಾಲ್, ಗಿರಿ ಸೆಂಟರ್, CCS HAUನಲ್ಲಿ ನಡೆಯಲಿದೆ.
ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ಮೇಲೆ ನಿರ್ಮಾಣವಾಗಿರುವ IIS ದಂಗಲ್ ಚಾಂಪಿಯನ್‌ಶಿಪ್ 2026, ಈ ಬಾರಿ ಮೊದಲ ಬಾರಿಗೆ ರಾಷ್ಟ್ರಮಟ್ಟದ ಭಾಗವಹಿಸುವಿಕೆಗೆ ಅವಕಾಶ ನೀಡಲಿದೆ. ದೇಶದಾದ್ಯಂತದ ಹಿರಿಯ ಕುಸ್ತಿಪಟುಗಳು ಫ್ರೀಸ್ಟೈಲ್ (FS), ಮಹಿಳಾ ಕುಸ್ತಿ (WW) ಮತ್ತು ಗ್ರೀಕೊ-ರೋಮನ್ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.
ಕಳೆದ ವರ್ಷ ಹರಿಯಾಣ ಮಟ್ಟದಲ್ಲಿ ನಡೆದ ಈ ಟೂರ್ನಿಯಲ್ಲಿ 240ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು. ಈಗ ರಾಷ್ಟ್ರಮಟ್ಟದ ಸ್ಪರ್ಧೆಗೆ ದ್ವಾರ ತೆರೆದಿರುವುದರಿಂದ, 2026ರ ಚಾಂಪಿಯನ್‌ಶಿಪ್ ಇನ್ನಷ್ಟು ದೊಡ್ಡ ಮಟ್ಟದಲ್ಲಿ ನಡೆಯುವಾ ನಿರೀಕ್ಷೆಯಿದ್ದು, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಕುಸ್ತಿ ಕ್ಷೇತ್ರಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ.IIS ದಂಗಲ್ ಚಾಂಪಿಯನ್‌ಶಿಪ್‌ನಲ್ಲಿ ತೂಕ ವಿಭಾಗಗಳ ಆಧಾರದಲ್ಲಿ ಶ್ರೇಷ್ಠತೆ, ಪ್ರಾಬಲ್ಯ ಮತ್ತು ಹೋರಾಟ ಮನೋಭಾವವನ್ನು ಗೌರವಿಸುವಂತೆ ರೂಪಿಸಲಾದ ಮೂರು ಪ್ರಮುಖ IIS ಪ್ರಶಸ್ತಿಗಳು ಇರಲಿವೆ.

ತೂಕ ವಿಭಾಗಗಳು ಮತ್ತು ಪ್ರಶಸ್ತಿಗಳು
ಸೀನಿಯರ್ ಫ್ರೀಸ್ಟೈಲ್ (FS)
57 ໖ – IIS
74 ಕೆಜಿ – IIS ವೀರ ಟೈಟಲ್
+74 ಕೆಜಿ – IIS ಯೋಧ ಟೈಟಲ್
ಸೀನಿಯರ್ ಗ್ರೀಕೊ-ರೋಮನ್ (GR)
60 ໖ – IIS
77 ಕೆಜಿ – IIS ವೀರ ಟೈಟಲ್
+77 ಕೆಜಿ – IIS ಯೋಧ ಟೈಟಲ್
ಸೀನಿಯರ್ ಮಹಿಳಾ ಕುಸ್ತಿ (WW)
53 ໖ – IIS
62 ಕೆಜಿ – IIS ವೀರ ಟೈಟಲ್
+62 ಕೆಜಿ – IIS ಯೋಧ ಟೈಟಲ್
ಚಾಂಪಿಯನ್‌ಶಿಪ್‌ನ ವೃದ್ಧಿಯ ಕುರಿತು ಮಾತನಾಡಿದ ಇನ್‌ಸ್ಟೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ನ ಅಧ್ಯಕ್ಷೆ ಮನೀಷಾ ಮಲ್ಲೋತ್ರಾ, IIS ದಂಗಲ್ ಚಾಂಪಿಯನ್‌ಶಿಪ್ ಕೇವಲ ಇನ್ನೊಂದು ಟೂರ್ನಿ ಮಾತ್ರವಲ್ಲ, ಕುಸ್ತಿಪಟುಗಳ ಪರಿಶ್ರಮ, ಧೈರ್ಯ ಮತ್ತು ಸ್ಥಿರತೆಯನ್ನು ಗೌರವಿಸುವ ವೇದಿಕೆ ನೀಡುವುದು IIS ದಂಗಲ್ ಚಾಂಪಿಯನ್‌ಶಿಪ್‌ನ ಉದ್ದೇಶವಾಗಿತ್ತು ಎಂದರು.

Leave a Reply

Your email address will not be published. Required fields are marked *

error: Content is protected !!