ಉದಯವಾಹಿನಿ, ನ್ಯೂಯಾರ್ಕ್ : ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿರುವ ಖಾಲಿಸ್ತಾನ್ ಗುಂಪುಗಳು `ಬೀಟಿಂಗ್ ರಿಟ್ರೇಟ್’ ಮುಂತಾದ ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಗುರಿಯಾಗಿಸುವುದಾಗಿ ಬೆದರಿಕೆ ಒಡ್ಡಿದೆ.
ಇದು ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೇರುವ ಪ್ರಯತ್ನವಾಗಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ. ಭಾರತದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ಜನವರಿ 29ರಂದು `ಬೀಟಿಂಗ್ ರಿಟ್ರೇಟ್’ ಸಮಾರಂಭ ನಡೆಯುತ್ತದೆ.
