
ಉದಯವಾಹಿನಿ ಮುದಗಲ್: ಮೊಹರಂ ಹಬ್ಬದ ನಿಮಿತ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಹುಸೇನಿ ಆಲಂ ದುರ್ಗಾ, ದೇವರ ಬಾವಿ, ಸಿ.ಸಿ. ಕ್ಯಾಮೆರಾ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಪರಿಶೀಲನೆ ಮಾಡಿದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು. ಲಿಂಗಸುಗೂರು ಡಿ.ವೈ.ಎಸ್.ಪಿ ಮಂಜುನಾಥ, ಮಸ್ಕಿ ಸಿಪಿಐ ಸಂಜೀವ ಕುಮಾರ ಬಳಿಗಾರ, ಪಿ.ಎಸ್.ಐ ಪ್ರಕಾಶ ಡಂಬಾಳ, ಹುಸೇನಿ ಆಲಂ ದುರ್ಗಾ ಸಮಿತಿ ಅಧ್ಯಕ್ಷ ಅಮೀರ್ ಬೇಗ್ ಉಸ್ತಾದ್, ಕಾರ್ಯದರ್ಶಿ ಮಹಮ್ಮದ್ ಸಾದಿಕ್ ಅಲಿ, ನ್ಯಾಮತ್ ಉಲ್ಲಾ ಖಾದ್ರಿ, ಜಮೀರ್ ಅಹಮ್ಮದ್ ಖಾದ್ರಿ ಇದ್ದರು.
