ಉದಯವಾಹಿನಿ,ಕಾರಟಗಿ: ನೂತನ ಹೈಟೆಕ್ ಬಸ್ ನಿಲ್ದಾಣದ ಸಂಪೂರ್ಣ ಕಾಮಗಾರಿ ಮುಗಿಯಬೇಕು. ಬಸ್ ನಿಲ್ದಾಣದ ಕಾಮಗಾರಿ ನನಗೆ ತೃಪ್ತಿದಾಯಕವಾದ ಮೇಲೆ ಬಸ್ ನಿಲ್ದಾಣದ ಉದ್ಘಾಟನೆ ಮಾಡುತ್ತೆನೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಂಗಳವಾರ ಪಟ್ಟಣದ ನೂತನ ಹೈಟೆಕ್ ಬಸ್ ನಿಲ್ದಾಣದ ಹಾಗೂ ಕಾರಟಗಿ ಕನಕಗಿರಿ ರಸ್ತೆ ಕಾಮಗಾರಿ ವೀಕ್ಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಲಿದೆ. ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ಮೇಲೆ ನಿಗಾಇಟ್ಟಿದ್ದೆನೆ. ಎಲ್ಲಿಲ್ಲಿ ಕಳಪೆಯಾಗಿದೆ ಎಂಬುದರ ಕುರಿತು ಕಾಮಗಾರಿ ವೀಕ್ಷಣೆ ಮಾಡಿದ್ದೆನೆ.
ಅಲ್ಲದೆ ಯರ‍್ಯಾರು ದೂರು ಸಲ್ಲಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಅಲ್ಲದೆ ಬಸ್ ನಿಲ್ದಾಣದ ಹಿಂಬದಿಯಲ್ಲಿ ಚರಂಡಿ ಕಾಮಗಾರಿ ಕಳಪೆಯಾಗಿದ್ದು ಅದಕ್ಕೆ ಸಂಬAಧಿಸಿದ ಅಧಿಕಾರಿಗಳ ಗುತ್ತಿಗೆದಾರರ ಸಭೆ ಕರೆದು ಚರ್ಚೆ ನಡೆಸುತ್ತೆನೆ. ಕಾಮಗಾರಿಯಲ್ಲಿ ಯಾವುದೆ ಲೋಪ ನಡೆದಲ್ಲಿ ಅಂತಹ ಗುತ್ತಿಗೆದಾರರ ವಿರುದ್ಧ ಕಾನೂನುರಿತ್ಯ ಕ್ರಮ ಕೈಗೊಳ್ಳುತ್ತನೆ.
ಅಭಿವೃದ್ಧಿ ವಿಷಯದಲ್ಲಿ ಎಂದು ರಾಜಕೀಯ ಮಾಡುವುದಿಲ್ಲಾ. ಮುಖ್ಯೆವಾಗಿ ನೂತನ ಬಸ್ ನಿಲ್ದಾಣ ಇನ್ನು ಸ್ವಲ್ಪ ಎತ್ತರವಾಗಬೇಕಿತ್ತು. ಕೆಳ ಸ್ಥರದಲ್ಲಿ ನಿರ್ಮಿಸಿದ್ದರಿಂದ ಬಸ್ ನಿಲ್ದಾಣ ಕಾಮಗಾರಿ ಅವೈಜ್ಞಾನೀಕವಾಗಿದೆ. ಬಸ್ ನಿಲ್ದಾಣದ ಕಾಮಗಾರಿಯಲ್ಲಿ ಎನೇನು ಸರಿಪಡಿಸಬೇಕೋ ಅವೆಲ್ಲವುಗಳನ್ನು ಸರಿಪಡಿಸಲು ಗುತ್ತಿಗೆದಾರರಿಗೆ ಸೂಚಿಸುತ್ತೆನೆ. ಅಲ್ಲದೆ ಕಾಮಗಾರಿಯ ನಡೆಯುವಲ್ಲಿ ಸಂಪೂರ್ಣ ನಿಗಾವಹಿಸಿದ್ದೆನೆ. ಇನ್ನು ಕಾಮಗಾರಿ ಬಾಕಿ ಇದೆ. ಬಸ್ ನಿಲ್ದಾಣ ಮುಂಭಾಗದ ವಿದ್ಯುತ್ ಕಂಬಗಳಿಗೆ ಸುಸಜ್ಜಿತ ಕೆಬಲ್ ಅಳವಡಿಸಲು ಸೂಚಿಸಿದ್ದೆನೆ. ಒಟ್ಟಾರೆ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಸಂಪೂರ್ಣವಾಗಿ ಮುಗಿದು ನನಗೆ ತೃಪ್ತಿತಂದ ನಂತರವೇ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು. ಈ ಸಂದರ್ಬದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸೇರಿದಂತೆ ಇತರರು ಇದ್ದರು.
