ಉದಯವಾಹಿನಿ , ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಅಭಿನಯನದ ‘ರಕ್ಕಸಪುರದೊಳ್’ ಸಿನಿಮಾ ಟ್ರೈಲರ್ ಔಟ್ ಆಗಿದೆ. ಸಖತ್ ಮಾಸ್ ಪೊಲೀಸ್ ಅಧಿಕಾರಿಯಾಗಿ ಎಂಟ್ರಿಕೊಟ್ಟಿದ್ದಾರೆ.
‘ರಕ್ಕಸಪುರದೊಳ್’ ಸಿನಿಮಾದ ಹೆಸರೇ ಹೇಳುವಂತೆ ಇದು ಒಂದು ಊರಿನ ಕತೆ.. ‘ರಕ್ಕಸಪುರದೊಳ್’ ಸಿನಿಮಾ ಸಸ್ಪೆನ್ಸ್ ಗ್ರಿಲ್ಲರ್ ಜೊತೆಗೆ ಆಕ್ಷನ್ ಮತ್ತು ಕಾಮಿಡಿ ಕೂಡ ಇದೆ. ಸಖತ್ ಆಕ್ಷನ್ ದೃಶ್ಯಗಳ ತುಣುಕುಗಳನ್ನು ತೋರಿಸಲಾಗಿದೆ.
ಕೊಲೆಗಳ ತನಿಖೆಯನ್ನು ನಡೆಸಲು ಬರುವ ಪೊಲೀಸ್ ಅಧಿಕಾರಿ ರಾಜ್ ಬಿ ಶೆಟ್ಟಿ. ಆದ್ರೆ ಅವರನ್ನ ನೋಡಿ ಪೊಲೀಸ್ ಹೌದಾ ಅನ್ನೋದೇ ಅಲ್ಲಿ ಇರೋರಿಗೆ ಅನುಮಾನ. ಸಮವಸ್ತ್ರ ಧರಿಸಿಲ್ಲ. ಗಡ್ಡ ಬಿಟ್ಟ, ಸದಾ ಕುಡಿಯುವ ರೀತಿ ಕಾಣಿಸಿಕೊಂಡಿದ್ದಾರೆ.
