ಉದಯವಾಹಿನಿ, ಬಾಲಿವುಡ್‌ನ ಜನಪ್ರಿಯ ಹಾಸ್ಯನಟ ರಾಜ್‌ಪಾಲ್ ಯಾದವ್ ಇತ್ತೀಚೆಗೆ ಕಾನೂನು ಸಮಸ್ಯೆಯಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಹಲವು ವರ್ಷಗಳಿಂದ ನಡೆದುಬಂದಿದ್ದ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು, ಅದರಂತೆ ಅವರು ತಿಹಾರ್ ಜೈಲಿಗೆ ಶರಣಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸುಮಾರು 27 ವರ್ಷಗಳಿಂದ ಸಿನಿಮಾಗಳಲ್ಲಿ ತಮ್ಮ ವಿಶಿಷ್ಟ ಹಾಸ್ಯಭರಿತ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಿರುವ ರಾಜ್‌ಪಾಲ್‌ ಯಾದವ್‌ ಅವರಿಗೆ ಕಾನೂನು ಸಮಸ್ಯೆಯಿಂದ ಹೊರಬರಲು ಈಗ ಸಹೋದ್ಯೋಗಿಗಳ ಬೆಂಬಲ ದೊರೆಯುತ್ತಿದೆ. ನಟ ಸೋನು ಸೂದ್ ಚಿತ್ರರಂಗದವರು ಅವರೊಂದಿಗೆ ಸಿನಿಮಾ ಒಪ್ಪಂದ ಮಾಡಿ ಅಡ್ವಾನ್ಸ್ ರೂಪದಲ್ಲಿ ಸಹಾಯ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಇದಾದ ಬಳಿಕ ಸಂಗೀತ ನಿರ್ದೇಶಕ ರಾವ್‌ ಇಂದೆರ್ಜೀತ್ ಸಿಂಗ್ ಅವರು 1.11 ಕೋಟಿ ರೂಪಾಯಿ ನೆರವು ನೀಡಿ ಗಮನ ಸೆಳೆದಿದ್ದಾರೆ.

ಇನ್ನೂ ಕೆಲ ಕಲಾವಿದರು ಸಹ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. 9 ಕೋಟಿ ರೂಪಾಯಿ ಸಂಬಂಧಿಸಿದ ಈ ಪ್ರಕರಣದಲ್ಲಿ ಹಣ ಪಾವತಿಸಿದರೆ ಅವರಿಗೆ ಬಿಡುಗಡೆಯ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!