ಉದಯವಾಹಿನಿ, ನ್ಯೂಯಾರ್ಕ್ (ಅಮೆರಿಕ): ಇಂಗ್ಲೆಂಡ್​​ನ ರಾಜ ಮೂರನೇ ಚಾರ್ಲ್ಸ್ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಲು ಅವಕಾಶ ಸಿಕ್ಕರೆ ಅತ್ಯಮೂಲ್ಯ ಕೊಹಿನೂರ್ ವಜ್ರವನ್ನು ಹಿಂದಿರುಗಿಸುವಂತೆ ಕೇಳುತ್ತೇನೆ ಎಂದು ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರು ಹೇಳಿದ್ದಾರೆ.
9/11ರ ಉಗ್ರ ದಾಳಿಯ ಸಂತ್ರಸ್ತರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಈ ಕುರಿತು ಮಮ್ದಾನಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅಮೆರಿಕಕ್ಕೆ ಭೇಟಿ ನೀಡಿರುವ ಬ್ರಿಟನ್​ ದೊರೆಯ ಬಳಿ ಏನು ಕೇಳುತ್ತೀರಿ ಎಂಬ ಪ್ರಶ್ನೆಗೆ ಈ ಮೇಲಿನಂತೆ ಅವರು ಉತ್ತರಿಸಿದ್ದಾರೆ.
ಬ್ರಿಟನ್​ ದೊರೆ ಭೇಟಿಯಾದ ಮಮ್ದಾನಿ: ಅಮೆರಿಕ ಭೇಟಿಯಲ್ಲಿರುವ ಬ್ರಿಟನ್​ ದೊರೆಯನ್ನು ನ್ಯೂಯಾರ್ಕ್​ ಮೇಯರ್​ ದಿನದ ಕೊನೆಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಯಾವ ವಿಷಯದ ಕುರಿತು ಚರ್ಚೆ ನಡೆದಿದೆ ಎಂಬುದು ತಿಳಿದಿಲ್ಲ. ತಾವೇ ಹೇಳಿದಂತೆ ಕೊಹಿನೂರ್​ ವಜ್ರದ ಬಗ್ಗೆ ರಾಜನ ಬಳಿ ಪ್ರಸ್ತಾಪಿಸಿದರೇ ಎಂಬುದು ತಿಳಿದುಬಂದಿಲ್ಲ.

ಅಪರೂಪದ ಹರಳು ಇಂಗ್ಲೆಂಡ್​ ಸೇರಿದ್ದೇಗೆ? 105.6 ಕ್ಯಾರೆಟ್‌ನ ಅಪರೂಪದ ವಜ್ರ ಕೊಹಿನೂರ್ 1849ರಲ್ಲಿ ಮಹಾರಾಜ ದುಲೀಪ್ ಸಿಂಗ್ ಅವರು ರಾಣಿ ವಿಕ್ಟೋರಿಯಾ ಅವರಿಗೆ ನೀಡಿದ್ದರು. ಇದನ್ನು 1937 ರಲ್ಲಿ ರಾಣಿ ತಾಯಿ ತಮ್ಮ ಕಿರೀಟದಲ್ಲಿ ಅಳವಡಿಸಿಕೊಂಡರು. ಅಂದಿನಿಂದ ಅದು ಬ್ರಿಟನ್​ ವಶದಲ್ಲಿಯೇ ಇದೆ. ಭಾರತವು, ಅಪರೂಪದ ಮತ್ತು ಬೆಲೆಬಾಳುವ ವಜ್ರವನ್ನು ಮರಳಿ ಪಡೆಯುವ ಬಗ್ಗೆ ಪ್ರಯತ್ನ ನಡೆಸಿದೆ. ಈ ಕುರಿತು ಇಂಗ್ಲೆಂಡ್​ ಸರ್ಕಾರ ಮತ್ತು ರಾಜಮನೆತನವನ್ನು ಹಲವು ಬಾರಿ ಒತ್ತಾಯಿಸಿದೆ. ಪ್ರಸ್ತುತ, ಕೊಹಿನೂರ್ ವಜ್ರವನ್ನು ಲಂಡನ್​ನಲ್ಲಿನ ಅರಮನೆಯಲ್ಲಿ ಇಡಲಾಗಿದೆ. ಬ್ರಿಟನ್​ ರಾಣಿಯರಾದ ವಿಕ್ಟೋರಿಯಾ, ಅಲೆಕ್ಸಾಂಡ್ರಾ, ಮೇರಿ, ಎಲಿಜಬೆತ್​ ಮತ್ತು ಎರಡನೇ ಎಲಿಜಬೆತ್​ ಅವರ ಕಿರೀಟದಲ್ಲಿ ಬಳಸಲಾಗಿರುವ ಕೊಹಿನೂರ್​ ವಜ್ರವು ಮೊಘಲ್ ಚಕ್ರವರ್ತಿಗಳು, ಇರಾನ್‌ನ ಷಾಗಳು, ಅಫ್ಘಾನಿಸ್ತಾನದ ಎಮಿರ್‌ಗಳು ಮತ್ತು ಸಿಖ್ ಮಹಾರಾಜರು ಸೇರಿದಂತೆ ಅನೇಕರ ಮಾಲೀಕತ್ವವನ್ನು ಹೊಂದಿದೆ” ಎಂದು ಐತಿಹಾಸಿಕ ರಾಯಲ್ ಪ್ಯಾಲೇಸಸ್ ದತ್ತಿ ಸಂಸ್ಥೆ ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!