ಉದಯವಾಹಿನಿ, ನಟಿ ಸಾಯಿ ಪಲ್ಲವಿ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಈಗ ಹಿಂದಿಯಿಂದಲೂ ಆಫರ್ಗಳು ಬರೋಕೆ ಆರಂಭ ಆಗಿವೆ. ಹಿಂದಿಯಲ್ಲಿ ಅವರು ನಟಿಸಿರುವ ‘ಏಕ್ ದಿನ್’ ಸಿನಿಮಾ ರಿಲೀಸ್ಗೆ ರೆಡಿ ಆಗಿದೆ. ಈ ಚಿತ್ರದ ವಿಶೇಷ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ವೇಳೆ ನಡೆದ ಘಟನೆ ಒಂದು ಚರ್ಚೆಗೆ ಕಾರಣ ಆಗಿದೆ. ಸಾಯಿ ಪಲ್ಲವಿ ಹೆಗಲಮೇಲೆ ಕೈ ಹಾಕಲು ಆಮಿರ್ ಖಾನ್ ಮಗ ಜುನೈದ್ ಖಾನ್ ಮುಂದಾಗಿದ್ದರು. ಆ ಬಳಿಕ ಅವರು ನಡೆದುಕೊಂಡ ರೀತಿ ಎಲ್ಲರ ಗಮನ ಸೆಳೆದಿದೆ.
ಸಾಯಿ ಪಲ್ಲವಿ ಹಾಗೂ ಜುನೈದ್ ಖಾನ್ ಅವರ ‘ಏಕ್ ದಿನ್’ ಸಿನಿಮಾಗೆ ಸುನೀಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಇದು ಥಾಯಿ ಭಾಷೆಯ ‘ಒನ್ ಡೇ’ ಸಿನಿಮಾದ ರಿಮೇಕ್ ಆಗಿದೆ. ಮನ್ಸೂರ್ ಖಾನ್, ಆಮಿರ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮೇ 1ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಶೇಷ ಶೋ ನೋಡಿದ ಬಳಿಕ ಆಮಿರ್ ಖಾನ್ ಅತ್ತಿದ್ದಾರೆ.
