ಉದಯವಾಹಿನಿ ಇಂಡಿ: ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಶಿಕ್ಷಣ ಸಂಸ್ಥೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಾದ ಪಿಎಸ್ಐ ಸೋಮೇಶ ಗೆಜ್ಜಿಯವರಿಗೆ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಎ ಎಸ್ ಪಾಟೀಲ ಹಾಗೂ ಪ್ರಾಂಶುಪಾಲರಾದ ಎಸ್ ಆರ್ ರಾಠೋಡ ಮುಖ್ಯ ಗುರುಗಳಾದ ಎ ಎಂ ಮುಚ್ಚಂಡಿಯವರು ಸೇರಿಕೊಂಡು ಪಿಎಸ್ಐ ಸೋಮೇಶ್ ಗೆಜ್ಜೆ ಅವರಿಗೆ ಶಾಲುಹೊದಿಸಿ ಸನ್ಮಾನಿಸಿದರು. ಪಿಎಸ್ಐ ಸೋಮೇಶ ಗೆಜ್ಜಿ ಅವರು ಸನ್ಮಾನ ಸ್ವೀಕರಿಸಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ದೇಶ ಮಾತನಾಡುತ್ತಾ ಕಾನೂನು ಇರುವುದು ನಮ್ಮೆಲ್ಲರ ರಕ್ಷಣೆಗಾಗಿ ಅದನ್ನು ಪರಿಪಾಲನೆ ಮಾಡಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯಕರ್ತವ್ಯ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಆದರೆ ವಿದ್ಯಾರ್ಥಿಗಳು ಮುಖ್ಯವಾಗಿ ಅರಿತುಕೊಳ್ಳಬೇಕಾಗಿದ್ದು ಮೊಬೈಲ್ ಬಳಕೆ ಕಡಿಮೆ ಮಾಡುವುದು ಮತ್ತು ನಿಮಗೆ ವಿದ್ಯಾಭ್ಯಾಸಕಾಗಿ ಎಷ್ಟು ಬೇಕೋ ಅಷ್ಟನ್ನೇ ಬಳಕೆ ಮಾಡಿ ಉಳಿದ ವಾಟ್ಸಪ್ ಸೇರಿದಂತೆ ಇನ್ನೂ ಅನೇಕ ವಿಷಯಗಳ ಅವಶ್ಯಕತೆ ತಮಗಿಲ್ಲ ಅಶ್ಲೀಲ ವಿಡಿಯೋ ನೋಡುವುದು ಅಶ್ಲೀಲ ಫೋಟೋಗಳು ಕಳಿಸುವುದು ಅಪರಾಧವಾಗಿದೆ ಅದನ್ನು ಮಾಡಬೇಡಿ ತಮಗೆ ಯಾವುದಾದರು ಅಪರಿಚಿತ ಕರೆ ಬಂದರೆ ಸ್ವೀಕರಿಸಬೇಡಿ ಆ ನಂಬರ್ ಇಂದ ತಮಗೆ ಬಹಳ ತೊಂದರೆ ಆಗುತ್ತಿದ್ದರೆ ನಮ್ಮ ಇಲಾಖೆಗೆ ಸಂಪರ್ಕಿಸಿ ನಿಮ್ಮೆಲ್ಲರ ರಕ್ಷಣೆಗಾಗಿ ನಮ್ಮ ಇಲಾಖೆ ಇರುವುದು ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎ ಸಿ ಪಾಟೀಲರು ಹಾಗೂ ಆಡಳಿತ ಅಧಿಕಾರಿಗಳಾದ ಎ ಎಸ್ ಪಾಟೀಲರು ಮಾತನಾಡಿದರು. ಆಡಳಿತ ಅಧಿಕಾರಿಗಳು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮೇಲೆ ಒಂದು ಸ್ವರಚಿತ ಕವನ ವಾಚನ ಮಾಡಿದರು ಪಿಎಸ್ಐ ಅಪಾರಜ್ಞಾನ ಸಂಪನ್ನರು ದೂರದೃಷ್ಟಿ ಉಳ್ಳವರು ಒಬ್ಬ ನಿಷ್ಠಾವಂತ ಪಿಎಸ್ಐ ಗೆ ಇರಬೇಕಾದ ಎಲ್ಲಾ ಗುಣಗಳು ಇವರಲ್ಲಿವೆ ಇಂತಹ ದಕ್ಷ ಆಡಳಿ ಅಧಿಕಾರಿ ನಮ್ಮ ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿ ನಮ್ಮ ಶಾಲೆಗೆ ಬಂದು ಈ ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು ತಿಳಸಿದರು . ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಜೆ ಪಿ ಪಾಟೀಲ ಶಿಕ್ಷಕಿ ವಂದನರಸ್ಮರಣೆ ಶ್ರೀಮತಿ ಪುಷ್ಪಾ ಅಥಣಿ ಶಿಕ್ಷಕಿಯವರು ನೆರವೇರಿಸಿ ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಮಸ್ತ ಶಾಲಾ ಭೋದಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದರು
