ಉದಯವಾಹಿನಿ ತಾಳಿಕೋಟಿ: ಪುರಸಭೆಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಕುಂದುಕೊರತೆ ಹಾಗೂ ಕೆಲಸ-ಕಾರ್ಯಗಳ ಕುರಿತು ತೋರುತ್ತಿರುವ ನಿಷ್ಕಾಳಜಿ ಹಾಗೂ ಹಾಳಾಗುತ್ತಿರುವ ವ್ಯವಸ್ಥೆಯನ್ನು ಆದಷ್ಟು ಬೇಗ ಸರಿಪಡಿಸುವಂತೆ ಆಗ್ರಹಿಸಿ ಜನಸೇವಾ ಸಂಘ (ರಿ) ಇದರ ಪದಾಧಿಕಾರಿಗಳು ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಮೂಲಭೂರ ಸೌಕರ್ಯಗಳಾದ ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಅದರಲ್ಲೂ ಸ್ವಚ್ಛತೆಯ ಕುರಿತು ನಿರ್ಲಕ್ಷö್ಯ ತೋರುತ್ತಿರುವುದರಿಂದ ಮಾರಕ ರೋಗಗಳು ಸೃಷ್ಠಿಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಇಲ್ಲಿ ಅಧಿಕಾರಿಗಳು ಅಧೀನ ಸಿಬ್ಬಂದಿಗಳಿ0ದ ಕಟ್ಟುನಿಟ್ಟಾಗಿ ಕೆಲಸಗಳನ್ನು ತೆಗೆದುಕೊಳ್ಳುತ್ತಿಲ್ಲವೆಂಬುದು ಸ್ವಚ್ಛವಾಗಿ ತಿಳಿದುಬರುತ್ತದೆ. ಪ್ರಮುಖವಾಗಿ ಈ ಮೊದಲು ಕೈಬರಹ ಉತಾರೆಗಳನ್ನು ನೀಡಲಾಗುತ್ತಿತ್ತು. ಇದರಿಂದ ಉತಾರೆಗಳು ಬೇಗನೆ ಸಿಗುತ್ತಿದ್ದವು. ಈಗ ಕಂಪ್ಯೂಟರ್ ಉತಾರೆಗೆ ಅರ್ಜಿ ಹಾಕಿ ತೆಗೆದುಕೊಳ್ಳಲು ಹೇಳುತ್ತಿರುವುದರಿಂದ ಸಾಕಷ್ಟು ವಿಳಂಬವಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಇದು ತಪ್ಪುವಂತಾಗಬೇಕು. ಇದರ ಜೊತೆಗೆ ಬಿನ್ ಶೇತ್ಕಿಯಾದ ನಿವೇಶನಗಳ ಉತಾರೆಯ ಪಿಆಯ್‌ಡಿ ಸಂಖ್ಯೆ ಬಂದರೂ ಸಾರ್ವಜನಿಕರಿಗೆ ಸಕಾಲಕ್ಕೆ ಕೊಡದೆ ವಿನಾಕಾರಣ ತೊಂದರೆ ಕೊಡಲಾಗುತ್ತಿದೆ. ಪುರಸಭೆ ಕಾರ್ಯಾಲಯದಲ್ಲಿ ಸೇವೆಯಲ್ಲಿರುವ ಸಿಬ್ಬಂದಿಗಳ ಹೆಸರು ಪದನಾಮ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು.
ಸದರಿ ಅವಸ್ಯವಸ್ಥೆ ಆದಷ್ಟು ಬೇಗ ಸರಿಪಡಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಕ್ರಮವಹಿಸದೇ ಹೋದರೆ ನಮ್ಮ ಜನಸೇವಾ ಸಂಘದ ವತಿಯಿಂದ ಪಟ್ಟಣದ ಸಾರ್ವಜನಿಕರ ಜೊತೆಗೂಡಿ ಪುರಸಭೆ ಕಾರ್ಯಾಲಯಕ್ಕೆ ಬೀಗ ಜಡಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಈ ವೇಳೆ ಸಂಘದ ಅಧ್ಯಕ್ಷ ಅಮೀತಸಿಂಗ್ ಮನಗೂಳಿ, ಸದಸ್ಯರಾದ ನಿತಿನ್ ಹಜೇರಿ, ವಿಠಲ ಹಜೇರಿ, ವಿಶ್ವನಾಥ ಹಜೇರಿ, ರಾಜು ಹಜೇರಿ, ಬಸವರಾಜ ಮಂಗ್ಯಾಳ, ಮುತ್ತು ಬುಡ್ಡರ, ರಫೀಕ ಲಾಹೋರಿ, ಆರೀಫ ರಾಯಚೂರ, ಪ್ರಭು ಗೌಡಗೇರಿ, ರಮೇಶ ವರದಪ್ಪನವರ, ಹನುಮಾನಸಿಂಗ್ ದೇವಿ, ಮಲ್ಲಿಕಾರ್ಜುನ ಹಿಪ್ಪರಗಿ, ಇಮಾಮಹುಸೇನ ಚೋರಗಸ್ತಿ, ಸಂತೋಷ ಹಜೇರಿ, ಸೂರಜ ಹಜೇರಿ, ಡಿ.ಆರ್. ಲೋಕರೆ, ಎನ್.ಎಂ. ಮೇಟಿ, ಹುಸೇನ ಉಸ್ತಾದ ಇದ್ದರು.

Leave a Reply

Your email address will not be published. Required fields are marked *

error: Content is protected !!