
ಉದಯವಾಹಿನಿ ದೇವದುರ್ಗ: ರಾಜ್ಯ ಸರಕಾರ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಯೀ ಯೋಜನೆ ಸರ್ವರ್ ಸಮಸ್ಯೆ ಹಿನ್ನೆಲೆ ಬಹುತೇಕ ಅರ್ಹ ಫಲಾನುಭವಿಗಳು ನಿತ್ಯ ಅಲೆದಾಟ ತಪ್ಪುತ್ತಿಲ್ಲ. ರಾಜ್ಯ ಸರಕಾರ ಮನೆಯೊಡತಿಗೆ ತಿಂಗಳ 2ಸಾವಿರ ರೂ. ಯೋಜನೆ ಸೌಲಭ್ಯಕ್ಕೆ ಮಹಿಳೆಯರು ಮುಗ್ಗಿಬಿದ್ದಿದ್ದಾರೆ. ಕರ್ನಾಟಕ, ಗ್ರಾಮ ಒನ್ ಸೇರಿ ಬಾಪೂಜಿ ಸೇವ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಪದೇ ಪದೇ ಸರ್ವರ್ ಸಮಸ್ಯೆ ಆಗುತ್ತಿದ್ದರಿಂದ ನೋಂದಣಿಗೆ ಬಂದಂತ ಅರ್ಹ ಫಲಾನುಭವಿಗಳು ವಾಪಸ್ ಹೋಗುವಂತಿದೆ. ಕೆಲ ಜನರು ನೆಟ್‍ವರ್ಕ್ ಬರುವತ್ತಿನ್ನವರಿಗೆ ಕೇಂದ್ರ ಮುಂದೆ ಕಾದು ಕುಳಿತ್ತಿಕೊಳ್ಳುತ್ತಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಯಾರೊಬ್ಬರು ಒಂದು ರೂ. ನೀಡುವಂತಿಲ್ಲ. ಒಂದೊಮ್ಮೆ ಕರ್ನಾಟಕ, ಗಾಮ ಒನ್ ಸಿಬ್ಬಂದಿಗಳು ಹಣ ಬೇಡಿಕೆಯಿಟ್ಟಲ್ಲಿ ತಾಲೂಕ ಆಡಳಿತ ಗಮನಕ್ಕೆ ತರುವಂತೆ ಆದೇಶ ಹೊರಡಿಸಿದ್ದಾರೆ. ಆದೇಶ ಹಿನ್ನೆಲೆ ಕರ್ನಾಟಕ, ಗ್ರಾಮ ಒನ್ ಸಿಬ್ಬಂದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗ್ರಾಮೀಣ ಭಾಗದಲ್ಲಿ 40ಕ್ಕೂ ಅಧಿಕ ಗ್ರಾಮ ಒನ್ ಆರಂಭಿಸಲಾಗಿದೆ. ಪದೇ ಪದೇ ಸರ್ವರ್ ಸಮಸ್ಯೆಯಿಂದ ಅರ್ಹ ಫಲಾನುಭವಿಗಳ ನೋಂದಣಿಗೆ ಜೀವ ಹಿಂಡಿದೆ. ಕಳೆದ ವಾರದಿಂದ ಬಿಟ್ಟೂ ಬಿಟ್ಟೂ ಮಳೆ ಸುರಿಯುತ್ತಿದ್ದರಿಂದ ಮತ್ತಿಷ್ಟ ಸಮಸ್ಯೆಗೆ ಕಾರಣವಾಗಿದೆ. ಸಂಜೆವತ್ತಿನ್ನವರಿಗೂ ಕಾದು ನೋಂದಣಿ ಕುಳಿತ್ತಿದ್ದಂತ ಅರ್ಹ ಫಲಾನುಭವಿಗೆ ನೋಂದಣಿ ಪ್ರಕ್ರಿಯೆ ಸಿಗದೇ ಒಂದೊಮ್ಮೆ ವಾಪಸ್ ಹೋಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೀಗ ಕೆಲವು ಕಡೆ ಕರ್ನಾಟಕ ಗ್ರಾಮ್ ಒನ್ ಸರ್ವರ್ ನೆಪದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದು ತಾಲೂಕ ಆಡಳಿತ ಗಮನಕ್ಕಿದೆ. ಗೃಹಲಕ್ಷ್ಮೀ ಸೌಲಭ್ಯಕ್ಕೆಂದು ಅರ್ಹ ಫಲಾನುಭವಿಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದೆ. ಹಿರೇಬೂದರು ಗ್ರಾಮದಲ್ಲಿರುವ ಬಾಪೂಜಿ ಸೇವ ಕೇಂದ್ರದಲ್ಲಿ ಹಣ ವಸೂಲಿ ಮಾಡುತ್ತಿರುವ ಬಂದ ದೂರು ಹಿನ್ನೆಲೆ ತಹಶೀಲ್ದಾರ ಸ್ಥಳಕ್ಕೆ ಭೇಟಿ ನೀಡಿ ವಾರ್ನಿಂಗ್ ಮಾಡಲಾಗಿದೆ.
ಬಾಕ್ಸ್
ಗೃಹಲಕ್ಷ್ಮೀ ಯೋಜನೆ ಜಾರಿಯಾಗುತ್ತಿದ್ದಂತೆ ಕರ್ನಾಟಕ, ಗ್ರಾಮ ಒನ್ ಕೇಂದ್ರದತ್ತ ಜನ ಆಗಮಿಸುತ್ತಿದ್ದಾರೆ. ಪದೇ ಪದೇ ಸರ್ವರ್ ಸಮಸ್ಯೆ ಹಿನ್ನೆಲೆ ಬೇಸತ್ತಿದ್ದಾರೆ. ಸೌಲಭ್ಯ ಪಡೆಯಲು ಬೆಳ್ಳಂಬೆಳ್ಳಿಗೆ ಕೇಂದ್ರಕ್ಕೆ ದೌಡಯಿಸುತ್ತಿದ್ದಾರೆ. ಕೇಂದ್ರದ ಬಳಿ ಬಂದಾಗ ಸರ್ವರ್ ಸಮಸ್ಯೆ ಎಂದಾಗ ಮತ್ತೆ ಸಂಜೆವರಿಗೆ ಕಾಯ ಬೇಕು ಎನ್ನುವ ಚಿಂತೆ ದಿಗಲು ಬಡಿಸಿದೆ.
ಬಾಕ್ಸ್
ಕಳೆದ ವಾರಗಳಿಂದ ಬಿಟ್ಟೂ ಬಿಟ್ಟೂ ಸುರಿಯುತ್ತಿರುವ ಮಳೆಯಿಂದ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಪಡೆಯಲು ಬಹುತೇಕ ಅರ್ಹ ಫಲಾನುಭವಿಗಳು ಹಳ್ಳಿ ಬಿಟ್ಟೂ ಬರುತ್ತಿಲ್ಲ. ಬೆಳಿಗ್ಗೆ ಆರಂಭವಾದ ಮಳೆ ಸಂಜೆವತ್ತಿನ್ನಿವರಿಗೆ ಬಿಡುತ್ತಿಲ್ಲ. ಹೀಗಾಗಿ ಸೌಲಭ್ಯಕ್ಕಾಗಿ ನೂರಾರು ಜನರಿಗೆ ಚಿಂತೆ ತರಿಸಿದೆ. ವಾರದಿಂದ ಮಳೆ ಬಿಡುತ್ತಿಲ್ಲ. ಇಂತಹ ಸಮಸ್ಯೆ ಹಿನ್ನೆಲೆ ಸೌಲಭ್ಯಕ್ಕಾಗಿ ಮಧ್ಯವರ್ತಿ ಹಾವಳಿ ಮೊರೆ ಹೋಗುವಂತಿದೆ.
