ಉದಯವಾಹಿನಿ: ಬಾಲಿನಟಿ ಸಮಂತಾ ಕೆಲವು ದಿನಗಳ ಹಿಂದೆ ತಮ್ಮ ಆರೋಗ್ಯದ ಕಾರಣದಿಂದ ಸಿನಿಮಾದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ಸದ್ಯ ಸಮಂತಾ ತಮ್ಮ ಬಿಡುವಿನ ವೇಳೆಯನ್ನು ಆನಂದಿಸುತ್ತಿದ್ದಾರೆ. ಬಾಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪ್ರವಾಸ ಮಾಡಿ, ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗಾಗಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದೀಗ ನಟಿ ಕೋತಿಯೊಂದಿಗೆ ಫೋಸ್ ನೀಡಿದ್ದಾರೆ. ಕೋತಿ ಸೆಲ್ಫಿ ಕ್ಲಿಕ್ಕಿಸುವಂತೆ ಕಂಡಿದ್ದು, ನಟಿಯ ಫ್ಯಾನ್ಸ್ ಫೋಟೊ ನೋಡಿ ಸಂತಸ ಹೊರಹಾಕಿದ್ದಾರೆ.
ಈ ಫೋಟೊಗೆ ಸಮಂತಾ ಸ್ಪಾಟ್ ದಿ ಮಂಕಿ ಎಂದು ನಟಿ ಶೀರ್ಷಿಕೆ ನೀಡಿದ್ದಾರೆ. ಚಿತ್ರದಲ್ಲಿ ಸಮಂತಾ ಸ್ನೇಹಿತೆ ಅನುಷಾ ಸ್ವಾಮಿ ಕೂಡ ಕಾಣಿಸಿಕೊಂಡಿದ್ದಾರೆ. ಬಾಲಿ ಪ್ರವಾಸದ ಅನೇಕ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದೀಗ ಪುಲ್ ಹ್ಯಾಪಿಯಾಗಿ ಕೋತಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಟಿ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಒಂದು ವರ್ಷ ಸಿನಿಮಾದಿಂದ ದೂರ ಉಳಿಯುವುದಾಗಿ ಸಮಂತಾ ಅಧಿಕೃತವಾಗಿ ಘೋಷಿಸಿದ್ದಾರೆ. ಇತ್ತೀಚೆಗೆ, ಅವರು ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಒಂದು ವರ್ಷ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡರು. ಈ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಮೋಜು -ಮಸ್ತಿಯಲ್ಲಿದ್ದಾರೆ.ಈ ಹಾದಿಯಲ್ಲಿ ದೇವಾಲಯಗಳು, ಧ್ಯಾನ ಕೇಂದ್ರಗಳು, ವಿಹಾರಗಳನ್ನು ಆನಂದಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಸಮಂತಾಸದ್ಗುರು ಇಶಾ ಕೇಂದ್ರದಲ್ಲಿ ಕಾಣಿಸಿಕೊಂಡಿದ್ದಳು.

Leave a Reply

Your email address will not be published. Required fields are marked *

error: Content is protected !!