ಉದಯವಾಹಿನಿ ಕುಶಾಲನಗರ – ನಮ್ಮ ಭಾರತೀಯ ಯೋಧರ ಸಾಹಸಗಾಥೆ ಮತ್ತು ಅವರ ತ್ಯಾಗದ ಪ್ರತೀಕವಾದ ೨೪ನೇ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮಾಚರಣೆಯನ್ನು ಸೈನಿಕ ಶಾಲೆ ಕೊಡಗಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮಹಾ ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾದ ಲೆಫ್ಟಿನೆಂಟ್ ಕರ್ನಲ್ ಪಿ ಎಸ್ ಗಣಪತಿ(ನಿವೃತ್ತ), ಗೂಗಲ್ ಮೀಟ್ ವರ್ಚುವಲ್ ಮೂಲಕ ಹಾಜರಿದ್ದರು.
ಕಾರ್ಯಕ್ರಮದ ಮೊದಲಿಗೆ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ ಕಣ್ಣನ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್, ಉಪಪ್ರಾಂಶುಪಾಲರಾದ ಸ್ಕಾ÷್ವಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್‌ರವರು ಶಾಲೆಯ ಎನ್ ಸಿ ಸಿ ಘಟಕದ ಸಹಯೋಗದೊಂದಿಗೆ ಶಾಲೆಯ ಆವರಣದಲ್ಲಿ ನಿರ್ಮಿಸಲ್ಪಟ್ಟಿರುವ ವೀರಯೋಧರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಸಮರ್ಪಿಸುವುದರೊಂದಿಗೆ ಗೌರವ ವಂದನೆ ಸಲ್ಲಿಸಿದರು. ಮುಖ್ಯ ಅತಿಥಿಗಳಾದ ಲೆಫ್ಟಿನೆಂಟ್ ಕರ್ನಲ್ ಪಿ ಎಸ್ ಗಣಪತಿ(ನಿವೃತ್ತ)ರವರು ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದು, ಕೊಡಗು ಜಿಲ್ಲೆಯ ವಿರಾಜಪೇಟೆಯ ಮೂಲದವರಾಗಿದ್ದು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಶೌರ್ಯದ ಹಲವು ಪ್ರಸಂಗಗಳನ್ನು ಸ್ಮರಿಸುವುದರ ಮೂಲಕ ಪ್ರಸ್ತುತ ದಿನದ ಮಹತ್ವವನ್ನು ವಿವರಿಸಿದರು. ಈ ಹೋರಾಟವು ನಮ್ಮ ರಾಷ್ಟçದ ಸಾರ್ವಭೌಮತ್ವವನ್ನು ಪರಾಕ್ರಮದಿಂದ ರಕ್ಷಿಸಿದ ನಮ್ಮ ಸೈನಿಕರ ಅದಮ್ಯ ಮನೋಭಾವ ಮತ್ತು ಶೌರ್ಯಕ್ಕೆ ಸಾಕ್ಷಿಯಾಗಿದೆ. ಹಾಗೆಯೇ ಮುಖ್ಯ ಅತಿಥಿಗಳು ತಮ್ಮ ಸಮರ್ಥ ನಾಯಕತ್ವದಡಿ ಅವರ ೮ನೇ ಮಹರ್ ಘಟಕದ ಪಡೆಗಳು ಶ್ರೀಲಂಕಾದಲ್ಲಿ ನಡೆಸಿದ ರಸ್ತೆ ತೆರವು ಕಾರ್ಯಾಚರಣೆ ಹಾಗೂ ೧೯೯೮ರ ಸಮಯದಲ್ಲಿ ಜಾಫ್ನಾದಲ್ಲಿ ಎದುರಿಸಿದ ಭೀಕರ ಯುದ್ಧದ ಸನ್ನಿವೇಶವನ್ನು ವಿವರಿಸಿದರು. ಹಾಗೆಯೇ ಶ್ರೀಯುತರು ತಮ್ಮ ಧೈರ್ಯ ಮತ್ತು ಸಾಹಸದ ಪ್ರತೀಕವಾಗಿ ಭಾರತದ ಅತ್ಯನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ಪ್ರಶಸ್ತಿಗೆ ಭಾಜನರಾಗಲು ಸಾಧ್ಯವಾಯಿತು ಎಂದು ಸ್ಮರಿಸಿದರು. ಹಾಗೆಯೇ ಪ್ರತಿಯೊಬ್ಬರೂ ಭಾರತೀಯ ಸೇನೆಗೆ ಸೇರಿ, ತಾಯ್ನಾಡಿನ ಸೇವೆಗೆ ಮುಂದಾಗಬೇಕೆAದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲರು ೧೯೯೯ರಲ್ಲಿ ಆಪರೇಷನ್ ವಿಜಯ್ ಸಂದರ್ಭದಲ್ಲಿ ರಾಷ್ಟçದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಭಾರತೀಯ ವೀರ ಯೋಧರು ತೋರಿದ ಧೈರ್ಯ, ಶೌರ್ಯ ಮತ್ತು ಸಮರ್ಪಣೆಗೆ ಹೃತ್ಪೂರ್ವಕವಾದ ಕೃತಜ್ಞತೆ ಸಲ್ಲಿಸಿದರು. ಎಂದು ಯುದ್ಧ ವೀರರಿಗೆ ಭರವಸೆ ನೀಡಿದರು. ಶಾಲೆಯು ೭೫ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ತಿಳಿಸಿದರು.
