ಉದಯವಾಹಿನಿ, ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾ ಸೋಲು ರಾಜಕೀಯ ತಿರುವು ಪಡೆದುಕೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಭಾರತೀಯ ಕ್ರಿಕೆಟ್ ತಂಡದ ಸೋಲಿಗೆ ಎಐಎಂಐಎಂ ನಾಯಕ ಶೋಯೆಬ್ ಜಮೈ ಧರ್ಮದ ಲೇಪನ ಹಚ್ಚಿದ್ದಾರೆ. ತಂಡದಲ್ಲಿ ಮುಸ್ಲಿಂ ಆಟಗಾರರಿಗೆ ಸ್ಥಾನ ನೀಡದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್‌ರಂಥ ಪ್ರತಿಭಾನ್ವಿತ ಆಟಗಾರರನ್ನ ನಿರ್ಲಕ್ಷಿಸಿ ಅಗ್ಗದ ಆಟಗಾರರನ್ನು ಸೇರಿಸಿಕೊಳ್ಳುವುದರಿಂದ ಖಂಡಿತವಾಗಿಯೂ ಭಾರೀ ನಷ್ಟವಾಗುತ್ತದೆ ಎಂದಿದ್ದಾರೆ.ಅಲ್ಲದೇ ಗೌತಮ್ ಗಂಭೀರ್… ನೀವು ಭಾರತ ತಂಡದ ಕೋಚ್, ಬಿಜೆಪಿ ಎಂಪಿಯಲ್ಲ ಎಂದು ಕಿಡಿಕಾರಿದ್ದಾರೆ. ಶೋಯೆಬ್ ಜಮೈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

 

Leave a Reply

Your email address will not be published. Required fields are marked *

error: Content is protected !!