ಉದಯವಾಹಿನಿ, ಮುಂಬೈ: ಸಿಕ್ಸರ್‌, ಬೌಂಡರಿಗಳ ಆಟದಲ್ಲಿ ಜಿಂಬಾಬ್ವೆ ವಿರುದ್ಧ ವೆಸ್ಟ್‌ ಇಂಡೀಸ್‌ 107 ರನ್‌ಗಳ ಭರ್ಜರಿ ಜಯ ಸಾಧಿಸಿದೆ.ಸೂಪರ್‌ 8 ಗ್ರೂಪ್‌ 1ರ ಎರಡನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ವಿಂಡೀಸ್‌ 6 ವಿಕೆಟ್‌ ನಷ್ಟಕ್ಕೆ 254 ರನ್‌ ಹೊಡೆಯಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಜಿಂಬಾಬ್ವೆ 147 ರನ್‌ ಹೊಡೆದು ಸೋಲೊಪ್ಪಿಕೊಂಡಿತು.
ಜಿಂಬಾಬ್ವೆ 52 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಾಗಲೇ ಸೋಲು ಖಚಿತವಾಗಿತ್ತು. ಹೀಗಿದ್ದರೂ ಕೊನೆಯಲ್ಲಿ ಬ್ರಾಡ್ ಇವಾನ್ಸ್ ಸ್ಫೋಟಕ 43 ರನ್‌(21 ಎಸೆತ, 2 ಬೌಂಡರಿ, 5 ಸಿಕ್ಸ್‌) ಸಿಡಿಸಿ ಸೋಲಿನ ಅಂತರವನ್ನು ಸ್ವಲ್ಪ ತಗ್ಗಿಸಿದರು.

ವಿಂಡೀಸ್‌ ಪರ ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ 85 ರನ್‌(34 ಎಸೆತ, 7 ಬೌಂಡರಿ, 7 ಸಿಕ್ಸ್‌), ರೋವ್‌ಮನ್ ಪೊವೆಲ್ 59 ರನ್‌(35 ಎಸೆತ, 4 ಬೌಂಡರಿ, 4 ಸಿಕ್ಸ್‌), ಶೆರ್ಫೇನ್ ರುದರ್ಫೋರ್ಡ್ 31 ರನ್‌(13 ಎಸೆತ, 3 ಬೌಂಡರಿ, 2 ಸಿಕ್ಸ್‌), ರೊಮಾರಿಯೊ ಶೆಫರ್ಡ್ 21 ರನ್‌(10 ಎಸೆತ, 3 ಸಿಕ್ಸ್‌) ಕೊನೆಯಲ್ಲಿ ಜೇಸನ್‌ ಹೋಲ್ಡರ್‌ 13 ರನ್‌(4 ಎಸೆತ, 2 ಸಿಕ್ಸ್‌) ಸಿಡಿಸಿದ ಪರಿಣಾಮ ತಂಡದ ಮೊತ್ತ 250 ರನ್‌ಗಳ ಗಡಿಯನ್ನು ದಾಟಿತು.
ಹೆಟ್ಮೆಯರ್ ಮತ್ತು ಪೊವೆಲ್ ಮೂರನೇ ವಿಕೆಟಿಗೆ 52 ಎಸೆತಗಳಲ್ಲಿ 122 ರನ್‌ ಜೊತೆಯಾಟವಾಡಿದ್ದು ವಿಂಡೀಸ್‌ ಭರ್ಜರಿ ಜಯಗಳಿಸುವಲ್ಲಿ ನೆರವಾಯ್ತು. ಅತ್ಯುತ್ತಮ ಆಟ ಪ್ರದರ್ಶಿಸಿದ ಹೆಟ್ಮೆಯರ್‌ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಿಕ್ಸರ್‌ ಬೌಂಡರಿಗಳ ಆಟ:
ಇಂದಿನ ಪಂದ್ಯದಲ್ಲಿ ವಿಂಡೀಸ್‌ ಪರ 19 ಸಿಕ್ಸ್‌, 16 ಬೌಂಡರಿ ದಾಖಲಾಗಿತ್ತು. ಜಿಂಬಾಬ್ವೆ 12 ಸಿಕ್ಸ್‌, 10 ಬೌಂಡರಿ ಹೊಡೆದಿತ್ತು. ಬೌಂಡರಿ ಸಿಕ್ಸರ್‌ನಿಂದ ವಿಂಡಿಸ್‌ 178 ರನ್‌ ಹೊಡೆದರೆ ಜಿಂಬಾಬ್ವೆ 112 ರನ್‌ ಹೊಡೆದಿತ್ತು.

Leave a Reply

Your email address will not be published. Required fields are marked *

error: Content is protected !!