
ಉದಯವಾಹಿನಿ ದೇವದುರ್ಗ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕರ್ನಾಟಕ ರೈತ ಸಂಘ ತೀವ್ರ ಖಂಡಿಸುತ್ತದೆ. ಕೊಡಲೇ ಆರೋಪಿಗಳಿಗೆ ಉಗ್ರವಾದ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕೆಆರ್‍ಎಸ್ ಸಂಘಟನೆ ತಾಲೂಕ ಸಮಿತಿ ಪದಾಧಿಕಾರಿಗಳು ರಾಷ್ಟ್ರಪತಿಗಳಿಗೆ ಬರೆದ ಮನವಿ ಗ್ರೇ2 ಶ್ರೀನಿವಾಸ ಚಾಪಲ್ ಮುಖಾಂತರ ಸಲ್ಲಿಸಿದರು. ಮಣಿಪುರ ಕಾಂಗ್‍ಪೋಕ್ಷಿ ಜಿಲ್ಲೆಯ ಬಿ.ಫೈನೋಮ್ ಗ್ರಾಮದಲ್ಲಿ ಕುಕಿ ಜೋ ಬುಡಕಟ್ಟಿನ ಇಬ್ಬರು ಮಹಿಳೆಯರನ್ನು ಬಲವಂತವಾಗಿ ಬಟ್ಟೆ ಬಿಚ್ಚಿ ಜನಸಮೂಹದಿಂದ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಯಿತು. ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಗಳನ್ನು ಬಂಧಿಸುವ ಜತೆ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರಕಳಸದಂತೆ ಅಲ್ಲಿನ ಸರಕಾರ ಎಚ್ಚರವಹಿಸಬೇಕು ಎಂದು ದೂರಿದರು. ದಲಿತ, ಹಿಂದುಳಿದ, ಅಲ್ಪಾಸಂಖ್ಯಾತರ, ಬುಡಕಟ್ಟ ಸೇರಿ ಇತರೆ ಸಮುದಾಯಗಳ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಲೆಕ್ಕವಿಲ್ಲದಷ್ಟು ಹೇಯೆ ಮಹಿಳಾ ವಿರೋಧಿ ಪ್ರಜಾಪ್ರಭುತ್ವ ವಿರೋಧಿ ಘಟನೆಗಳು ನಡೆದಿದೆ. ಸರಕಾರ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ ಘಟನೆ ಗಂಭೀರವಾಗಿ ಪರಿಗಣಿಸಿಸಬೇಕು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಕೆ.ಗಿರಿಲಿಂಗಸ್ವಾಮಿ, ದುರುಗಣ್ಣ ಇರಬಗೇರಾ, ಶಫಿಕ್ ಪಾಷಾ, ಜಯಗೌಡ ಬಿ.ಆರ್.ಗುಂಡ, ಮೌನೇಶ, ಹನುಮಂತ್ರಾಯ. ಕೆ.ಅಂಜು ಸೇರಿ ಇತರರು ಇದ್ದರು.
