
ಉದಯವಾಹಿನಿ ಮಾಲೂರು :– ತಾಲ್ಲೂಕಿನ ಚೊಕ್ಕಂಡಹಳ್ಳಿ ಗ್ರಾಮದಲ್ಲಿನ ಶ್ರೀ ಕಾಟೇರಮ್ಮ ದೇವಿಯ ದೇವಾಲಯದ ಪುನರ್ ಜೀವನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಮಡಿವಾಳ ಗ್ರಾಮ ಪಂಚಾಯಿತಿಯ ಚೊಕ್ಕಂಡಹಳ್ಳಿ ಗ್ರಾಮದಲ್ಲಿ ಅನಾಧಿಕಾಲದಿಂದಲೂ ನೆಲೆಸಿರುವ ಶ್ರೀ ಮಾತೇ ಕಾಟೇರಮ್ಮ ದೇವಾಲಯದಲ್ಲಿ ಪುನರ್ ಜೀವನ ಪ್ರಯುಕ್ತ ವಿಶೇಷ ದೈವಿಕ ಕೈಂಕರ್ಯಗಳು ನಡೆದವು. ಬೆಳಿಗ್ಗೆಯಿಂದ ವಿಶೇಷ ಪೂಜೆ, ಹೋಮ, ಹವನ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.ವಿಶೇಷವಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಿ. ಎಲ್.ಧನಸಿಂಗ್ ರವರು ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಊರಿನ ಮುಖಂಡ ರಾಜರೆಡ್ಡಿ, ಧನರಾಜ್. ಸಿ.ಎನ್, ನಾಗೇಶ್, ಬಾಬು, ಕುಮಾರ, ಚಂದ್ರ, ಉಮಾಶಂಕರ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು
