
ಉದಯವಾಹಿನಿ ಚಿಂಚೋಳಿ: ತಾಲ್ಲೂಕಿನಲ್ಲಿ ಕಳೆದ ಹತ್ತು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾಗೂ ನಾಗರಾಳ ಹಾಗೂ ಚಂದ್ರಂಪಳ್ಳಿ ಜಲಾಶಯಗಳು ಭರ್ತಿಯಾಗಿರುವುದರಿಂದ ಜಲಾಶಯಗಳಿಂದ ಮುಲ್ಲಾಮಾರಿ ನದಿಗೆ ಹೊರ ಬಿಡುತ್ತಿರುವ ನೀರಿನಿಂದ ರೈತರ ಜಮೀನುಗಳಿಗೆ ನುಗ್ಗಿ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು ಬೆಳೆಗಳು ಜಲಾವೃತ ಆಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.ಈಗಾಗಲೇ ತಾಲ್ಲೂಕಿನಾದ್ಯಂತ ರೈತರು ತೊಗರಿಬೆಳೆ,ಹೆಸರು,ಉದ್ದು,ಸೋಯಾಬಿನ್ 74867 ಹೆಕ್ಟೇರ್ ಜಮೀನು ಬಿತ್ತನೆ ಮಾಡಲಾಗಿದ್ದು,ಅಪಾರ ಪ್ರಮಾಣದ ಮಳೆ ಹಾಗೂ ಜಲಾಶಯದಿಂದ ಬರುವ ನದಿಯ ನೀರಿನಿಂದ ಬೆಳೆನಷ್ಟ ಸಮೀಕ್ಷೆ ನಡೆಯುತ್ತಿದ್ದು ಸದ್ಯ 800ಹೇಕ್ಟರ್ ಜಮೀನು ರೈತರ ಬೆಳೆ ನಷ್ಟವಾಗಿದ್ದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೇಟ್ಟಿ ರಾಠೋಡ್ ತಿಳಿಸಿದ್ದಾರೆ.ನಾಗರಾಳ ಹಾಗೂ ಚಂದ್ರಂಪಳ್ಳಿ ಜಲಾಶಯಗಳ ಹೊರಬಿಡುವ ನದಿಯ ದಂಡೆಯಲ್ಲಿರುವ ಗ್ರಾಮಗಳಾದ ನಾಗರಾಳ,ಚಿಮ್ಮನಚೋಡ,ತಾದಲಾಪೂರ, ಕನಕಪುರ,ಗಾರಂಪಳ್ಳಿ,ಚಿಂಚೋಳಿ,ಚಂದಾ ಪೂರ,ಅಣವಾರ,ಪೋಲಕಪಳ್ಳಿ,ಗಂಗನಪಳ್ಳಿ, ಮೋತಕಪಳ್ಳಿ,ಗರಗಪಳ್ಳಿ,ಭಕ್ತಂಪಳ್ಳಿ ಗ್ರಾಮಗಳ ರೈತರ ಜಮೀನುಗಳಲ್ಲಿ ನೀರು ನುಗ್ಗಿ ಹಾಗೂ ಇತರೆ ಜಮೀನುಗಳಾದ ತೆಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ನಿಂತ್ತುಕೊಂಡು ನೂರಾರು ಏಕರೆ ಜಮೀನಿನ ರೈತರ ಬೆಳೆನಷ್ಟವಾಗಿದ್ದು ರೈತರು ಕಂಗಾಲಾಗಿದ್ದು ಸರ್ಕಾರ ಮುತುವರ್ಜಿ ವಹಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರ ಮನವಿಯಾಗಿದೆ.
ತಾಲ್ಲೂಕಿನಾದ್ಯಂತ ಸತತವಾಗಿ ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ 92ಮನೆಗಳು ಕುಸಿದು ಬಿದ್ದಿವೆ,ಯಾವುದೇ ಪ್ರಾಣಹಾನಿ ಆಗಿರುವುದಿಲ್ಲಾ,ರೈತರ ಜಮೀನಿನ ಬೆಳೆನಷ್ಟ ಕುರಿತು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಲಾಗುತ್ತಿದೆ ಬೆಳೆನಷ್ಟ ಹಾಗೂ ಕುಸಿದುಬಿದ್ದ ಮನೆಗಳಿಗೆ ಪರಿಹಾರಕ್ಕಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ರವಾನಿಸುತ್ತಿದ್ದೇವೆ ಆದಷ್ಟು ಶೀಘ್ರ ರೈತರ ಖಾತೆಗಳಿಗೆ ಹಣ ಜಮಾವಣೆ ಆಗಲಿದೆ :- ವೆಂಕಟೇಶ ದುಗ್ಗನ್ಗ್ರೇಡ್2 ತಹಸೀಲ್ದಾರ್ ಚಿಂಚೋಳಿ
ತಾಲ್ಲೂಕಿನಾದ್ಯಂತ ರೈತರು ತೊಗರಿಬೆಳೆ,ಹೆಸರು,ಉದ್ದು,ಸೋಯಾಬಿನ್ 74867 ಹೆಕ್ಟೇರ್ ಜಮೀನು ಬಿತ್ತನೆ ಮಾಡಲಾಗಿದ್ದು,ಸತತವಾಗಿ ಸುರಿದ ಮಳೆ ಹಾಗೂ ಜಲಾಶಯದಿಂದ ಬಿಡುವ ನದಿಯ ನೀರಿನಿಂದ ಬೆಳೆನಷ್ಟ ಸಮೀಕ್ಷೆ ನಡೆಯುತ್ತಿದ್ದು ಸದ್ಯ 800ಹೇಕ್ಟರ್ ಜಮೀನು ರೈತರ ಬೆಳೆ ನಷ್ಟವಾಗಿದ್ದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ :- ವೀರಶೇಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ ಚಿಂಚೋಳಿ.
ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯದ ನೀರಿನ ಪ್ರಮಾಣ
:- ತಾಲ್ಲೂಕಿನ ನಾಗರಾಳ ಜಲಾಶಯ ಗರಿಷ್ಠ ಮಟ್ಟ 491.00ಮೀಟರವಿದ್ದು ಇಂದಿನ ಸಂಗ್ರಹ ನೀರು 490.00ಮೀಟರವಿದೆ ಒಳಹರಿವು 2000ಕ್ಯೂಸೇಕ್ ಇದೆ,ಹೊರಹರಿವು 1700ಕ್ಯೂಸೇಕ್ ನೀರು ನದಿಗೆ ಬಿಡಲಾಗುತ್ತಿದೆ ಎಂದು ಜಲಾಶಯ ಎಇಇ ಅರುಣಕುಮಾರ ತಿಳಿಸಿದ್ದಾರೆ.
:– ಚಂದ್ರಂಪಳ್ಳಿ ಜಲಾಶಯ ನೀರಿನ ಗರಿಷ್ಟ ಮಟ್ಟ 1618 ಅಡಿ
ಇಂದಿನ ಮಟ್ಟ 1610.50ಅಡಿ ಒಳಹರಿವು 4305 ಕ್ಯೂಸೇಕ್ ಇದ್ದು,ಹೊರಹರಿವು 4795 ಕ್ಯೂಸೇಕ್ ನೀರು ಬಿಡಲಾಗುತ್ತಿದೆ,ಉಪಯುಕ್ತ ನೀರಿನ ಸಾಮರ್ಥ್ಯ 0.85 ಟಿ.ಎಮ್.ಸಿ. ಎಂದು ಜಲಾಶಯ ಎಇಇ ಚೇತನ ಕಳಸ್ಕರ ತಿಳಿಸಿದ್ದಾರೆ.
ತಾಲ್ಲೂಕಿನ ಮಳೆಯ ಪ್ರಮಾಣ.
ಚಿಂಚೋಳಿ 21.0ಮಿಮೀ,ಕುಂಚಾವರಂ 90.4 ಮಿಮೀ,ನಿಡಗುಂದಾ 14.0ಮಿಮೀ,ಚಿಮ್ಮನಚೋಡ 19.2ಮಿಮೀ,ಐನಾಪುರ 28.5ಮಿಮೀ,ಸುಲೇಪೇಟ್ 18.6ಮಿಮೀ ಮಳೆಯಾಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದ್ದಾರೆ.
