ಉದಯವಾಹಿನಿ, ಮುಂಬೈ : ಛೋಟಾ ರಾಜನ್ ಗ್ಯಾಂಗ್‍ನ ಸದಸ್ಯನೊಬ್ಬನಕೊಲೆ ಪ್ರಕರಣದಲ್ಲಿ ಭಾಗಿಯಾಗಿ ನಂತರ ತಲೆಮರೆಸಿಕೊಂಡಿದ್ದ ಛೋಟಾ ಶಕೀಲ್ ಗ್ಯಾಂಗ್‍ನ ಪ್ರಮುಖ ಸದಸ್ಯನೊಬ್ಬನನ್ನು ಮುಂಬೈ ಪೊಲೀಸರು 25 ವರ್ಷಗಳ ನಂತರ ಬಂಧಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು 50 ವರ್ಷದ ಲಾಯಿಕ್ ಅಹ್ಮದ್ ಫಿದಾ ಹುಸೇನ್ ಶೇಖ್ ಎಂದು ಗುರುತಿಸಲಾಗಿದೆ.ಛೋಟಾ ಶಕೀಲ್ ಗ್ಯಾಂಗ್‍ನ ಪ್ರಮುಖ ಶೂಟರ್ ಆಗಿದ್ದ ಶೇಖ್‍ನನ್ನು ನಿನ್ನೆ ಥಾಣೆ ರೈಲ್ವೆ ನಿಲ್ದಾಣದ ಬಳಿ ಪೈಡೋನಿ ಪೊಲೀಸರು ಬಂಧಿಸಿದ್ದಾರೆ. ಶೇಖ್ ಬಂಧಿತ ಭೂಗತ ಡಾನ್ ಛೋಟಾ ರಾಜನ್ ಗ್ಯಾಂಗ್‍ನ ಸದಸ್ಯನ ಹತ್ಯೆಯಲ್ಲಿ ಆರೋಪಿಯಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.ಆರೋಪಿಯು ತನ್ನ ಸಹಚರರೊಂದಿಗೆ ಬಂಧಿತ ಭೂಗತ ಪಾತಕಿ ಛೋಟಾ ರಾಜನ್ ಗ್ಯಾಂಗ್ ನ ಮುನ್ನಾ ಧಾರಿ ಎಂಬಾತನನ್ನು 1997ರ ಏಪ್ರಿಲ್ 2ರಂದು ಸಂಜೆ ಗುಂಡಿಕ್ಕಿ ಕೊಂದಿದ್ದ.
ಆ ವೇಳೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಶೇಖ್ ನನ್ನು ಐಪಿಸಿಯ ಸೆಕ್ಷನ್ 302, 34 ಮತ್ತು ಶಸಾಸ ಕಾಯ್ದೆಯ ಸೆಕ್ಷನ್ 3, 25 ಅಡಿಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದರು.
