ಉದಯವಾಹಿನಿ ಹುಣಸಗಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಿಂದೂ-ಮುಸ್ಲಿ0 ಭಾವೈಕತೆಯ ಮೋಹರಂ ಹಬ್ಬವು ಶನಿವಾರ ಸಂಜೆ ಸಂಭ್ರಮದೊ0ದಿಗೆ ಆಚರಿಸಲಾಯಿತು. ಹುಣಸಗಿ, ಅಗ್ನಿ, ದ್ಯಾಮನಾಳ, ಕಾಮನಟಗಿ, ಅಮಲಿಹಾಳ, ಕೊಡೇಕಲ್ ಸೇರಿದಂತೆ ಹಲವು ಗ್ರಾಮಗಳಲ್ಲಿ ಮೋಹರಂ ಆಚರಿಸಿ ದೇವರ ದಪ್ಪನ ಮಾಡಲಾಯಿತು. ವಿವಿಧ ಹೆಜ್ಜೆಗಳ ಹಾಕುತ್ತಾ ಜನರು ಶಾಂತಿಯುತವಾಗಿ ಹಬ್ಬವು ಆಚರಿಸಿ ಹಿಂದೂ-ಮುಸ್ಲಿ0 ಭಾವೈಕತೆಯ ಮೆರೆದರು. ಭಕ್ತರು ಕಾಯಿ ಸಕ್ಕರೆ ಅರ್ಪಿಸಿ ಭಕ್ತಿ ಸಮರ್ಪಿಸಿದರು.
