ಉದಯವಾಹಿನಿ,ಚಿಂಚೋಳಿ: ಕಳೆದ ಹತ್ತು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾದ ರೈತರ ಜಮೀನುಗಳಲ್ಲಿನ ಬೆಳೆಗಳು ಹಾಗೂ ಗ್ರಾಮಗಳಲ್ಲಿ ಕುಸಿದುಬಿದ್ದ ಮನೆಗಳು ಸೇತುವೆಗಳನ್ನು ಸೇಡಂ ಸಹಾಯಕ ಆಯುಕ್ತರಾದ ಆಶಪ್ಪಾ ಅವರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ಮಾಡಿದ್ದರು.
ತಾಲ್ಲೂಕಿನ ನಿಡಗುಂದಾ,ಸುಲೇಪೇಟ,ಸಿರೋಳ್ಳಿ,ಗರಗಪಳ್ಳಿ,ಭಕ್ತಂಪಳ್ಳಿ,ಮುರಾರ್ಜಿ ದೇಸಾಯಿ ವಸತಿಶಾಲೆ,ಹೂನಳ್ಳಿ ವಿವಿಧ ಗ್ರಾಮಗಳಿಗೆ ಭೇಟಿನೀಡಿ ಸತತವಾಗಿ ಸುರಿದ ಮಳೆಯಿಂದ ಹಾನಿಯಾದ ರೈತರ ಬೆಳೆಗಳು,ಗ್ರಾಮದ ಮನೆಗಳು,ಮೇಲ್ದರ್ಜೆಗೆರಿಸುವ ಸೇತುವೆಗಳು ವೀಕ್ಷಣೆ ಮಾಡಿ ಕೂಡಲೇ ವರದಿ ಕಳಿಸುವಂತೆ ತಹಸೀಲ್ದಾರ್ ವೀರೇಶ ಮುಳಗುಂದಮಠ ಅವರಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನ ನಿಡಗುಂದಾ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿನೀಡಿ ಮಕ್ಕಳಿಗೆ ನೀಡುವ ಊಟದ ಗುಣಮಟ್ಟವನ್ನು ಪರೀಕ್ಷಿಸಿ ಶಾಲೆಯ ಮಕ್ಕಳೊಂದಿಗೆ ಊಟ ಮಾಡಿದ್ದರು.
ಈ ಸಂದರ್ಭದಲ್ಲಿ ತಾಪಂ.ಇಓ ಶಂಕರ ರಾಠೋಡ್,ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಕೃಷಿ ಎಡಿ ವೀರಶೇಟ್ಟಿ ರಾಠೋಡ್,ಪಿಡಬ್ಲೂಡಿ ಪ್ರಭಾರಿ ಎಇಇ ವಿಶ್ವನಾಥ ಸಜ್ಜನ,ಟಿಹೆಚ್ಓ ಡಾ.ಮಹ್ಮುದ್ ಗಫಾರ,ಎಂಐ ಎಇಇ ಶಿವಶರಣಪ್ಪಾ ಕೇಶ್ವಾರ,ಅಕ್ಷರ ದಾಸೋಹ ಎಡಿ ಜಯಪ್ಪ ಚಾಪಲ್,ಚುನಾವಣಾ ಸಿರಸ್ತೇದಾರ ಸುಭಾಷ್ ನಿಡಗುಂದಾ,ಕೇಶವ ಕುಲಕರ್ಣಿ,ತೋಟಗಾರಿಕೆ ಎಡಿ ರಾಜಕುಮಾರ,ಅನೇಕ ತಾಲ್ಲೂಕಾ ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!