ಉದಯವಾಹಿನಿ ಅರಸೀಕೆರೆ : ವಿಧಾನಸಭಾ ಕ್ಷೇತ್ರದ ದುಮ್ಮೇನಹಳ್ಳಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ಮೀಸಲಾಗಿದ್ದ ಹಿಂದುಳಿದ ವರ್ಗ ಎ ಅಧ್ಯಕ್ಷ ಸ್ಥಾನ ಹಾಗೂ ಪರಿಶಿಷ್ಟ ಪಂಗಡ ಮಹಿಳೆ ಉಪಾಧ್ಯಕ್ಷ ಸ್ಥಾನ ನಿಗದಿಯಾಗಿತ್ತು ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಿದ ಸಮಾಜ ಕಲ್ಯಾಣ ಅಧಿಕಾರಿಗಳಾದ ಶ್ರೀಯುತ ಪರಶಿವಮೂರ್ತಿ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಿ ನಾಮಪತ್ರಕ್ಕೆ ಅವಕಾಶ ಕಲ್ಪಿಸಿ ಕೊಟ್ಟರು ಅಧ್ಯಕ್ಷ ಸ್ಥಾನಕ್ಕೆ ಅಜಯ್ ಅಮ್ಮನಟ್ಟಿ ಉಪಾಧ್ಯಕ್ಷ ಸ್ಥಾನಕ್ಕೆ ಲಲಿತಮ್ಮ ಆನೆನಳ್ಳಿ ನಾಮಪತ್ರ ಸಲ್ಲಿಸಿದರು ನಾಮಪತ್ರ ಸಲ್ಲಿಕೆ ಅವಧಿ ಮುಗಿಯುವವರೆಗೂ ಯಾವುದೇ ಬೇರೆ ನಾಮಪತ್ರ ಸಲ್ಲಿಕೆ ಆಗದ ಕಾರಣ ಚುನಾವಣಾ ಅಧಿಕಾರಿಗಳು ದುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಜಯ್ ಅಮನಟ್ಟಿ ಹಾಗೂ ಉಪಾಧ್ಯಕ್ಷರಾಗಿ ಲಲಿತಮ್ಮ ಆನೆನಳ್ಳಿ ರವರನ್ನ ಅವಿರೋಧ ಆಯ್ಕೆ ಎಂದು ಘೋಷಿಸಿದರು.
ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಒಟ್ಟು 23 ಸದಸ್ಯರಿದ್ದು ಸರ್ವಾನುಮತದಿಂದ ಪಂಚಾಯತಿಯ ಅಭಿವೃದ್ಧಿ ದೃಷ್ಟಿಯಿಂದ ಅವಿರೋಧ ಆಯ್ಕೆಗೆ ಸದಸ್ಯರು ಅನುವು ಮಾಡಿಕೊಟ್ಟರು ಚುನಾವಣಾ ಸಂದರ್ಭದಲ್ಲಿ ಮಾಜಿ ದುಮ್ಮನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಬಂಡಿಹಳ್ಳಿ ಗಿರೀಶ್, ದಾಸಿಹಳ್ಳಿ ಶಂಕ್ರಪ್ಪ, ಜಯಣ್ಣ ಸದಸ್ಯರಾದ ಶ್ರೀಯುತ ಸುನಿಲ್, ಹಿರಿಯ ಸದಸ್ಯರಾದ ಮಹಾಲಿಂಗಪ್ಪ ದುಮ್ಮೇನಹಳ್ಳಿ, ಮಂಗಳ ಕುಮಾರ್, ಬಂಡಿಹಳ್ಳಿ ರಾಜಪ್ಪ, ಲಿಂಗರಾಜು ಗಂಗನಾಯಕ್, ಶ್ರೀಮತಿ ಮಂಜುಳಾ, ದಿವ್ಯ ರಾಣಿ, ಬಾಮಮಣಿ,  ಮೈತ್ರಿ, ಪಂಚಾತಿ ಪಿಡಿಒ ಶಿವಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನ ಅಭಿನಂದಿಸಿದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಸಭೆಯನ್ನು ಉದ್ದೇಶಿ ಸರ್ಕಾರದ ವಿರುದ್ಧ ವಿವಿಧ ಸೌಲಭ್ಯಗಳನ್ನು ಪಕ್ಷಾತೀತವಾಗಿ ಪ್ರತಿ ಗ್ರಾಮಕ್ಕೂ ತಾರತಮ್ಯ ಇಲ್ಲದೆ ಅನುದಾನ ನೀಡಿ ಹಿರಿಯ ಅರಸೀಕೆರೆ ತಾಲೂಕಿನಲ್ಲಿ ಮಾದರಿ ಗ್ರಾಮ ಪಂಚಾಯತಿಯಾಗಿ ಸರ್ವ ಸದಸ್ಯರ ಸಹಕಾರದೊಂದಿಗೆ ಸಕಾರ ಗೊಳಿಸಲು ಪ್ರಯತ್ನಿಸುತ್ತೇನೆ ಅಜಯ್ ಅಮ್ಮನಟ್ಟಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!