ಉದಯವಾಹಿನಿ ಕೋಲಾರ :- ತಾಲ್ಲೂಕಿನ ಶ್ರೀ ಕ್ಷೇತ್ರ ಅಂದ್ರಹಳ್ಳಿ ಬೆಟ್ಟದ ಶ್ರೀ ಸೂರ್ಯ ಮಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಯೋಗ ನಮಸ್ಕಾರಗಳನ್ನು ಮಾಡಲಾಯಿತು.ಭಾನುವಾರ ಮುಂಜಾನೆ 5:00 ಗಂಟೆಗೆ ಲೋಕ ಕಲ್ಯಾಣಾರ್ಥವಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸೂರ್ಯ ನಮಸ್ಕಾರ, ಗಣಪತಿ ನಮಸ್ಕಾರ, ಷಣ್ಮುಖ ನಮಸ್ಕಾರ, ಶಿವ ನಮಸ್ಕಾರ, ಹನುಮ ನಮಸ್ಕಾರ, ದುರ್ಗಾ ನಮಸ್ಕಾರ, ವಿಷ್ಣು ನಮಸ್ಕಾರವನ್ನು ಯೋಗ ಬಂಧುಗಳು ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವಕೀಲರ ಭವನ ಶಾಖೆಯ ಯೋಗ ಶಿಕ್ಷಕರಾದ ಮಾರ್ಕೊಂಡಣ್ಣ ,ಶ್ರೀನಿವಾಸಣ್ಣ, ಯೋಗ ಬಂಧುಗಳಾದ ಉಮಾಶಂಕರ್, ಪತ್ರಕರ್ತ ಚಂದ್ರು, ಮುರಳಿ, ಋಷಿಲ್, ರಮ್ಯ, ಬೀಬಿಜಾನ್, ರಾಜೇಶ್ವರಿ, ಲತಾ, ಆಶಾ, ರಾಣಿ, ಅಮಲ, ಸತೀನಾ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!