
ಉದಯವಾಹಿನಿ ಮುದಗಲ್: ಜಿಲ್ಲೆಯ 23 ಕೆರೆಗಳ ನೀರು ತುಂಬವುದಕ್ಕೆ ರೂ. 445 ಕೋಟಿಗಳು ನೀಡಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಭೋಸರಾಜ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತ ನಾಡಿದರು. ಮೊದಲ ಕಂತಿನಲ್ಲಿ ರೂ. 95 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಎರಡ ನೇ ಹಂತದಲ್ಲಿ ರೂ. 350 ಕೋಟಿಗಳನ್ನು ಬಿಡುಗಡೆ ಮಾಡಿ ಕೃಷ್ಣಾ ನದಿಯಿಂದ ಕೆರೆ ನೀರು ತುಂಬಿಸುತ್ತೇವೆ. 23 ಕೆರೆಗಳಿಂದ 165 ಕಿ. ಮೀ. ಪೈಪ್ ಲೈನ್ ಕಾಮಗಾರಿ ಮಾಡಿಸುತ್ತೇವೆ. ಮಸ್ಕಿ ಶಾಸಕ ಬಸನಗೌಡ ತುರುವಿಹಾಳ, ಮಾಜಿ ಶಾಸಕರಾದ ಡಿ.ಎಸ್. ಹೂಲಗೇರಿ, ರಾಜಾ ರಾಯಪ್ಪ ನಾಯಕ, ಅಮರಗುಂಡಪ್ಪ ಮೇಟಿ, ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಚಂದ್ರಪ್ಪಗೌಡ ಯರದಿಹಾಳ, ಪಾಮಯ್ಯ ಮುರಾರಿ, ಡಿ.ಜಿ.ಗುರಿಕಾರ ಇತರರು ಇದ್ದರು.
