ಉದಯವಾಹಿನಿ, ಬೆಂಗಳೂರು: ಕನ್ನಡ ನ್ಯೂಸ್ ಚಾನೆಲ್ ನವರು ಹೇಳಿಕೊಂಡು ಉದ್ಯಮಿಗಳು, ವ್ಯಾಪಾರಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ನಾಲ್ವರು ಖತರ್ನಾಕ್ ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಮಾನಂದ ಅಲಿಯಾಸ್ ಕೃಷ್ಣೇಗೌಡ, ಕೇಶವಮೂರ್ತಿ,ಶ್ರೀನಿವಾಸ ಅಲಿಯಾಸ್ ರೇಷ್ಮೆ ನಾಡು ಶ್ರೀನಿವಾಸ,ಆನಂದ ಅಲಿಯಾಸ್ ಫಿಗರ್ ಆನಂದ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದು ಕಾರು,೧೩ ಸಾವಿರ ರೂ ನಗದು, ಮೊಬೈಲ್ ಗಳನ್ನು ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್ .ಡಿ.ಶರಣಪ್ಪ ಅವರು ತಿಳಿಸಿದರು.
ಆರೋಪಿಗಳು ತಾವು ನ್ಯೂಸ್ ಚಾನೆಲ್ ರವರು ಎಂದು ಹೇಳಿ
ಕೊಂಡು ಉದ್ಯಮಿಗಳು, ವ್ಯಾಪಾರಿಗಳು ಸೇರಿ ಕೆಲವು ವ್ಯಕ್ತಿಗಳನ್ನು ಭೇಟಿ ಮಾಡಿ ಎ.ಕೆ.ನ್ಯೂಸ್ ಕನ್ನಡ’ ಚಾನೆಲ್‌ನಲ್ಲಿ ನಿಮ್ಮ ವಿರುದ್ಧದ ಸುದ್ದಿಯನ್ನು ಪ್ರಸಾರ ಮಾಡಿ ಬಳಿಕ ಪೊಲೀಸರಿಗೆ ಹೇಳಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುದು ಎಂದು ಹೆದರಿಸಿ ಲಕ್ಷಾಂತರ ರೂ ಸುಲಿಗೆ ಮಾಡುತ್ತಿದ್ದು ಈ ಬಗ್ಗೆ ನಗರದ ಪೊಲೀಸ್ ಠಾಣೆಯೊಂದರಲ್ಲಿ ದಾಖಲಾಗಿದ್ದ ದೂರನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿ ವಿಭಾಗಕ್ಕೆ ವರ್ಗಾವಣೆಮಾಡಲಾಗಿತ್ತು. ತನಿಖೆಯನ್ನು ಎಲ್ಲಾ ಅಯಾಮಗಳಲ್ಲಿ ಕೈಗೊಂಡು ಮಾಹಿತಿ ಸಂಗ್ರಹಿಸಿದ ಸಿಸಿಬಿಯ ಸಂಘಟಿತ ಅಪರಾಧದ ಅಧಿಕಾರಿ ಹಾಗೂ ಸಿಬ್ಬಂದಿಗಳು ಖಚಿತವಾದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
