ಉದಯವಾಹಿನಿ ಹುಣಸಗಿ: ಸಮೀಪದ ದ್ಯಾಮನಾಳ ಗ್ರಾಮದಲ್ಲಿ ಎಚ್‌ಬಿಸಿ ಕಾಲುವೆಗೆ ನೀರು ಹರಿದು ಬಂದ ಹಿನ್ನಲೆ ಗ್ರಾಮದ ವಿವಿಧ ನಾರೆಯರು ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ಭಾಗದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಜೀವನಾಡಿಯಾದ ಬಸವಸಾಗರ ಜಲಾಶಯ ಭರ್ತಿಗೊಂಡಿದ್ದು, ರೈತರಿಗೆ ಹಾಗೂ ಜೀವ ಸಂಕಲುಗಳ ಉಳಿವಿಗಾಗಿ ಕಾಲುವೆಗೆ ನೀರು ಹರಿಸಿದ್ದರಿಂದ ಸಂತಸಗೊAಡು ಗ್ರಾಮೀಣ ಸೊಗಡಿನ ಜನಪದ ಶೈಲಿಯ ಪದಗಳನ್ನು ಹಾಡಿ ಮನರಂಜಿಸಿ ಗಂಗಾ ಮಾತೆಗೆ ಭಕ್ತಿ ಅರ್ಪಿಸಲಾಯಿತು.
ಈ ಸಂದರ್ಭ ವೀರಸಂಗಮ್ಮ.ಡಿ.ಸಾಹುಕಾರ, ಶರಣಮ್ಮ.ಡಿ.ಬಿರಾದಾರ, ಲಕ್ಷಿö್ಮÃಬಾಯಿ ಮಾಲಿಪಾಟೀಲ, ಮಲ್ಲಮ್ಮ ಉಪ್ಪಾರ, ನಾಗಮ್ಮ ಕಡದರಾಳ ಸೇರಿದಂತೆ ಅನೇಕ ಮಹಿಳೆಯರು ಇದ್ದರು.

Leave a Reply

Your email address will not be published. Required fields are marked *

error: Content is protected !!