
ಉದಯವಾಹಿನಿ ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರೇಣುಕಾ ಅಶೋಕ ಖಂಡೆಕರ ಹಿಂದುಳಿದ ವರ್ಗ ಅ ಮಹಿಳೆ ಕ್ಷೇತ್ರಕ್ಕೆ ಮತ್ತು ಉಪಾಧ್ಯಕ್ಷರಾಗಿ ಭೀಮಾಶಂಕರ ಷಣ್ಮುಖಪ್ಪ ಆಳೂರ ಸಾಮಾನ್ಯ ಸ್ಥಾನಕ್ಕೆ ಅವಿರೋಧ ಆಯ್ಕೆಯಾದರು. ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಇಂಡಿಯ ಮಹಾದೇವಪ್ಪ ಏವೂರ ಚುನಾವಣೆ ಅಧಿಕಾರಿಯಾಗಿದ್ದರು. ಪಿಡಿಓ ಸಿದ್ದು ಸಿನಿಖೇಡ, ಗ್ರಾ.ಪಂ ಸದಸ್ಯ ಅಶೋಕ ಖಂಡೆಕಾರ, ತಾ.ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಹಣಮಂತ ಖಂಡೆಕರ,ಶ್ರೀಶೈಲ ಸಾವಳಗಿ,ತುಕಾರಾಮ ತಾಂಬೆ ಮತ್ತಿತರಿದ್ದರು. ಉಪಸ್ಥಿತರಿದ್ದರು.
