
ಉದಯವಾಹಿನಿ ದೇವರಹಿಪ್ಪರಗಿ:ತಾಲೂಕಿನ ಕೋರವಾರ ಗ್ರಾಮ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಮಂಗಳವಾರದಂದು ಜರುಗಿತು.
ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಹೆಚ್ಚು ನಾಮಪತ್ರಗಳು ಸಲ್ಲಿಕೆ ಆಗದ ಕಾರಣ ಅಧ್ಯಕ್ಷರಾಗಿ ಶ್ರೀಮತಿ ಸೈನಾಜಬಿ ರ ಬ್ಯಾಕೋಡ ಹಾಗೂ ಉಪಾಧ್ಯಕ್ಷರಾಗಿ ಮಹಾದೇವಪ್ಪ ಶ ರಾಮನಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಾಜಶೇಖರ ವೀರಶೇಟರ ಘೋಷಿಸಿದರು.
ಗ್ರಾ ಪಂ ಯ ಒಟ್ಟು 22 ಸದಸ್ಯರಲ್ಲಿ 14ಜನ ಸದಸ್ಯರು ಹಾಜರಾಗಿದ್ದು 8ಜನ ಸದಸ್ಯರು ಗೈರುಹಾಜರಾಗಿದ್ದರು. ಈ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಮಾಜಿ ಅಧ್ಯಕ್ಷರುಗಳಾದ ರಾಜಶೇಖರ ಛಾಯಗೋಳ, ಮಹಾಂತೇಶ ತಾಳಿಕೋಟಿ, ಮಾಜಿ ಉಪಾಧ್ಯಕ್ಷ ಬಸನಗೌಡ ಬಿರಾದಾರ, ಸದಸ್ಯರುಗಳಾದ ರುಕ್ಮಪಟೇಲ ವಡಗೇರಿ, ಜಿಮೀಬಾಯಿ ರಾಠೋಡ, ಭೀಮಪ್ಪ ಮೋಪಗಾರ, ಶಾಂತಾಬಾಯಿ ಜಾದವ, ಅಮೀನಾಬಾನು ವಡಗೇರಿ, ಮಾಂಗಲ್ಯ ಆಲಗೂರ, ಮಲ್ಲಪ್ಪ ಪಟ್ಟಣ.ಉಮೇಶ ಕಾಖಂಡಕಿ ಹಾಗೂ ಪ್ರೇಮಾ ಶಂಕರ ನಾಯಕ ಭಾಗವಹಿಸಿದ್ದರು.
ಚುನಾವಣೆಯಲ್ಲಿ ಅಧಿಕಾರಿಗಳಾದ ಪಿಡಿಒ ಎಸ್ ಎಸ್ ಗಣಾಚಾರಿ, ಕಾರ್ಯದರ್ಶಿ ಜಿ ವ್ಹಿ ಪಟ್ಟಣಶೆಟ್ಟಿ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗ ಚುನಾವಣೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ಸಂಗಮೇಶ ಛಾಯಗೋಳ, ಪ್ರಮುಖರಾದ ಸುಬ್ಬನಗೌಡ ಪೊಲೀಸ್ ಪಾಟೀಲ, ಸಂಗಪ್ಪಗೌಡ ಬಿರಾದಾರ, ಅಪ್ಪಾಸಾಹೇಬಗೌಡ ಪಾಟೀಲ, ಭೋಜಪ್ಪಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಶ್ರೀನಾಥಗೌಡ ಪಾಟೀಲ, ಗುರುಪಾದಪ್ಪಗೌಡ ಪಾಟೀಲ, ಸಂಗಮೇಶ್ ಮ್ಯಾಗೇರಿ, ಬಿ ಸಿ ಹೊನಮಟ್ಟಿ, ಅರುಣ ನಾಯಕ, ಅರವಿಂದ ರಾಠೋಡ,ವಿಜಯ ಚವ್ಹಾಣ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸದಸ್ಯರು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ ಪರಿಣಾಮ ಎರಡನೇ ಅವಧಿಗೂ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.30 ತಿಂಗಳು ಜನಪರ ಆಡಳಿತ ನೀಡಿದ್ದು. ರಾಜ್ಯದಲ್ಲಿ ನಮ್ಮ ಸರ್ಕಾರವಿದೆ ಶಾಸಕರ, ಸಂಸದರ ಹಾಗೂ ಸಚಿವರ ಸಹಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜಿಲ್ಲೆಯಲ್ಲಿ ಮಾದರಿ ಗ್ರಾಮ ಪಂಚಾಯಿತಿ ಮಾಡಲು ಎಲ್ಲಾ ಸದಸ್ಯರು ಶ್ರಮವಹಿಸಬೇಕು.
– ಸಂಗಮೇಶ ಛಾಯಗೋಳ. ಪಿಕೆಪಿಎಸ್ ಅಧ್ಯಕ್ಷರು ಕೋರವಾರ.
